ಮೂಲ್ಕಿ: ನೆಹರು ಯುವ ಕೇಂದ್ರ ಮಂಗಳೂರು ,ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ ತೋಕೂರು ,ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿಗೆ ವಿಜೇತ ಯುವಕ ಸಂಘ ತೋಕೂರು ,ರೋಟರಿ ಸಮುದಾಯದಳ ತೋಕೂರು ಇವರ ಜಂಟಿ ಸಹಯೋಗದಲ್ಲಿ ತೋಕೂರಿನ ಯುವಕ ಸಂಘದ ಸ್ವರ್ಣ ಸಭಾಂಗಣದಲ್ಲಿ ಆಟಿದ ನೆಂಪು ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಗೋವಿಂದ ದಾಸ್ ಕಾಲೇಜಿನ ಉಪನ್ಯಾಸಕಿ ಪಲ್ಲವಿ ರಾಜೇಶ್ ಮಾತನಾಡಿ, ನಮ್ಮ ತುಳುನಾಡಿನ ವಿಶಿಷ್ಟ ಆಚರಣೆಯ ಮಹತ್ವವನ್ನು ನಮ್ಮ ಮಕ್ಕಳಿಗೆ ವೈಜ್ಞಾನಿಕ ರೀತಿಯಲ್ಲಿ ತಿಳಿಯಪಡಿಸಿ ಅದನ್ನು ಮುಂದುವರಿಸಿಕೊAಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ರತ್ನ ಭಂಡಾರಿ ಆಟಿಕಳೆಂಜದ ಹಾಡು ಹೇಳಿ ಎಲ್ಲರನ್ನು ರಂಜಿಸಿದರು. ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷೆ ಯಶೋಧ ಪಿ ರಾವ್ ಪ್ರಸ್ತಾವನೆ ಗೈದರು. ಮಹಿಳಾಮಂಡಲದ ಅಧ್ಯಕ್ಷೆ ಅನುಪಮಾ ಎ ರಾವ್ ಸ್ವಾಗತಿಸಿ, ಯುವಕ ಸಂಘದ ಅಧ್ಯಕ್ಷ ಶೇಖರ್ ಶೆಟ್ಟಿಗಾರ್ ವಂದಿಸಿದರು. ಮಹಿಳಾಮಂಡಲದ ಹಿರಿಯ ಸದಸ್ಯೆ ವಿನೋದ ಭಟ್ ಕಾರ್ಯಕ್ರಮ ನಿರೂಪಿಸಿದರು. ನೂರಕ್ಕೂ ಹೆಚ್ಚು ಮಂದಿ ಆಟಿದ ನೆಂಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಭೋಜನವನ್ನು ಸವಿದರು.