Share this news

ಮೂಲ್ಕಿ: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಇವರುಗಳ ಮಾರ್ಗದರ್ಶನದಲ್ಲಿ
ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಾಣವಾಗುತ್ತಿರುವ ಅಮೃತ ವಾಟಿಕಾ ವನಕ್ಕೆ ನೆಲದ ಮಣ್ಣು ಕಳಿಸುವ ನನ್ನಮಣ್ಣು -ನನ್ನದೇಶ ಅಭಿಯಾನಕ್ಕೆ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್ ತೋಕೂರು,ಹಳೆಯಂಗಡಿ. ಇದರ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಕ್ಲಬ್‌ನ ಹಿರಿಯ ಸದಸ್ಯ ಹಾಗೂ ಸಮಾಜ ಸೇವಕ ಮಹೇಶ್ ಸುವರ್ಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶ ಪ್ರೇಮದ ಜಾಗೃತಿ ಸದಾ ನಮ್ಮಲ್ಲಿರಬೇಕು, ಸೈನಿಕರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕಾರ್ಯದಲ್ಲಿ ಯುವ ಜನತೆಯು ತೊಡಗಿಸಿಕೊಳ್ಳಬೇಕು ,ದೇಶದ ಮಣ್ಣಿನ ಸತ್ಯದ ಅರಿವು ಎಲ್ಲರ ಮನದಲ್ಲಿ ಮೂಡಬೇಕು ಎಂದರು.

ಈ ಅಭಿಯಾನದಲ್ಲಿ ಸ್ಫೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಜಗದೀಶ್ ಕುಲಾಲ್, ಉಪಾಧ್ಯಕ್ಷ ಸುನಿಲ್ ದೇವಾಡಿಗ, ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ, ನಿಕಟಪೂರ್ವ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ, ಪರಿಸರ ಸಂರಕ್ಷಣಾ ಕಾರ್ಯದರ್ಶಿ ಸಂಪತ್ ದೇವಾಡಿಗ,ಲೆಕ್ಕ ಪರಿಶೋಧಕ ಸುಭಾಸ್ ಅಮೀನ್, ಕ್ರೀಡಾ ಕಾರ್ಯದರ್ಶಿ ಯೂನುಸ್,ಗಣೇಶ್ ದೇವಾಡಿಗ, ಹಿಮಕರ್ ಕೋಟ್ಯಾನ್ ,ಮಹೇಶ್ ಸುವರ್ಣ, ಸಚಿನ್ ಆಚಾರ್ಯ ಮತ್ತು ಮತ್ತಿತರರು ಪಾಲ್ಗೊಂಡಿದ್ದರು.

 

 

 

 

Leave a Reply

Your email address will not be published. Required fields are marked *