ಮುಲ್ಕಿ: ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ 2021ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ತೋಕೂರು ದೈವರಾಜ ಕೊಡ್ಡಬ್ಬು ದೈವಸ್ಥಾನಕ್ಕೆ 25 ಕುರ್ಚಿಗಳನ್ನು ಸಂಸ್ಥೆಯ ವತಿಯಿಂದ ಜು.2 ರಂದು ವಿತರಿಸಲಾಯಿತು.
ಈ ಮೊದಲು ಸಂಸ್ಥೆಯ ವತಿಯಿಂದ 75 ಕುರ್ಚಿಗಳನ್ನು ತೋಕೂರು ಕೊಡ್ಡಬ್ಬು ದೈವಸ್ಥಾನಕ್ಕೆ ನೀಡಲಾಗಿದ್ದು, ಇದೀಗ ಮನವಿಯ ಮೇರೆಗೆ ಮತ್ತೆ 25 ಕುರ್ಚಿಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೊಡ್ಡಬ್ಬು ದೈವಸ್ಥಾನದ ಗುರಿಕಾರರು, ಸಮಿತಿ ಸದಸ್ಯರು, ಸ್ಫೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಸಂತೋಷ್ ದೇವಾಡಿಗ, ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್, ಕ್ಲಬ್ ನ ಕಾರ್ಯಾಧ್ಯಕ್ಷರಾದ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ.ವಿ.ಅಂಚನ್ ,ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್, ಜೊತೆ ಕಾರ್ಯದರ್ಶಿ ಗೌತಮ್ ಬೆಲ್ಚೆಡ, ಕೋಶಾಧಿಕಾರಿ ಸಂಪತ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪ್ರಶಾಂತ್ ಕುಮಾರ್ ಬೇಕಲ್, ಶ್ರೀಮತಿ ಪ್ರಮೀಳಾ.ಕೆ ದೇವಾಡಿಗ, ಸದಸ್ಯರಾದ ಶಿಗಣೇಶ್ ಪೂಜಾರಿ, ಮಹಮದ್ ಯುನೂಸ್, ಗಣೇಶ್ ದೇವಾಡಿಗ, ಧರ್ಮನಂದ ಶೆಟ್ಟಿಗಾರ್, ಚಂದ್ರಶೇಖರ ದೇವಾಡಿಗ ಹಾಗೂ ಪಾಂಡುರAಗ ಮೇಸ್ತ, ಮಹಿಳಾ ಸದಸ್ಯೆಯರಾದ ಶ್ರೀಮತಿ ಸುರೇಖಾ, ಶ್ರೀಮತಿ ಮೀನಾಕ್ಷಿ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು