ಮೂಲ್ಕಿ: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಗ್ರಾಮ ಪಂಚಾಯತ್ ಪಡುಪಣಂಬೂರು, ತಾಲೂಕು, ಮತ್ತು ಜಿಲ್ಲಾ ಯುವಜನ ಒಕ್ಕೂಟ,ದ ಕ ಜಿಲ್ಲೆ, ಇವರುಗಳ ಮಾರ್ಗದರ್ಶನದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆ,ತೋಕೂರು ಇದರ ಸಹಕಾರದಲ್ಲಿಜಿಲ್ಲಾ, ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆ,ತೋಕೂರು ಇಲ್ಲಿನ ವಠಾರದಲ್ಲಿ ಚೇರಿ, ಮತ್ತು ಬಾದಾಮ್ ಗಿಡಗಳನ್ನು ನೆಡುವುದರ ಮೂಲಕ ಹಾಗೂ ಕಳೆದ ಬಾರಿ ನೆಟ್ಟಿರುವ ಗಿಡಗಳಿಗೆ ಕಟ್ಟೆ ಬಿಡಿಸಿ,ಗೊಬ್ಬರ ಹಾಕಿ ಆರೈಕೆ ಮಾಡುವುದರೊಂದಿಗೆ ಕ್ಲಬ್ ನ ಅಧ್ಯಕ್ಷರಾದ ಜಗದೀಶ್ ಕುಲಾಲ್ “ವನಮಹೋತ್ಸವ ಮತ್ತು ಪರಿಸರ ಸಂರಕ್ಷಣೆ ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್, ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಕುಲಾಲ್, ಉಪಾಧ್ಯಕ್ಷ ಸುನಿಲ್ ದೇವಾಡಿಗ ,ಪ್ರಧಾನ ಕಾರ್ಯದರ್ಶಿ ದೀಪಕ್ ಸುವರ್ಣ, ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ, ನಿಕಟ ಪೂರ್ವ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋಧಾ ದೇವಾಡಿಗ, ಪರಿಸರ ಸಂರಕ್ಷಣಾ ಕಾರ್ಯದರ್ಶಿ ಜಗದೀಶ್ ಕೋಟ್ಯಾನ್,ಕ್ಲಬ್ ನ ಕ್ರಿಕೆಟ್ ತಂಡದ ನಾಯಕ ಗೌತಮ್ ಬೆಲ್ಚೆಡ್, ಸದಸ್ಯರಾದ ಚಂದ್ರಶೇಖರ ದೇವಾಡಿಗ, ಚಂದ್ರ ಸುವರ್ಣ, ಸೋಮನಾಥ್, ಮಹಿಳಾ ಸದಸ್ಯೆಯರಾದ ಪ್ರಮೀಳಾ.ಕೆ.ದೇವಾಡಿಗ, ಶ್ರೀಮತಿ ಸರಿತಾ ಹಾಗೂ ಮತ್ತಿತರರು ಭಾಗವಹಿಸಿದ್ದರು.