Share this news

ಮುಲ್ಕಿ : ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ,ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ದ.ಕ ಜಿಲ್ಲಾಡಳಿತ, ಗ್ರಾಮ ಪಂಚಾಯತ್ ಪಡುಪಣಂಬೂರು, ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ, ದ.ಕ ಜಿಲ್ಲೆ,
ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,2021ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು ಹಳೆಯಂಗಡಿ ಇವರ ಆಶ್ರಯದಲ್ಲಿ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ನಿವೃತ್ತ ಯೋಧರಾದ ಹವಾಲ್ದಾರ್ ಚಂದ್ರಶೇಖರ್ ಅವರನ್ನು ಗಣ್ಯರ, ಸಂಸ್ಥೆಯ ಸದಸ್ಯರ, ಸದಸ್ಯೆಯರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಚಂದ್ರಶೇಖರ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ತನ್ನ 17 ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ನೆನಪುಗಳನ್ನು ಮೆಲುಕು ಹಾಕಿ ‘ದೇಶದ್ರೋಹಿಗಳೊಂದಿಗೆ ಸಾಹಸ, ಧೈರ್ಯದಿಂದ ಹೋರಾಡುವ ಸೈನಿಕರು ಇಂದಿನ ಯುವಪೀಳಿಗೆಗೆ ಸ್ಫೂರ್ತಿ ಆಗುವ ಮೂಲಕ ಯುವಕರು ಹೆಚ್ಚಾಗಿ ಸೇನೆಗೆ ಸೇರ್ಪಡೆಗೊಂಡು ದೇಶ ಸೇವೆ ಮಾಡುವಂತಾಗಲಿ’ ಎಂದರು.

ಈ ಸಂದರ್ಭದಲ್ಲಿ ನರೇಂದ್ರ ಕಿರೋಡಿಯನ್, ಶ್ರೀಮತಿ ವಿದ್ಯಾ ರಾಕೇಶ್, ಮೋಹನ್ ದಾಸ್, ದಿನಕರ್ ಸಾಲ್ಯಾನ್, ಯೋಗೀಶ್ ಕೋಟ್ಯಾನ್, ಲಕ್ಷ್ಮಣ್ ಸಾಲ್ಯಾನ್, ಪ್ರಶಾಂತ್ ಕುಮಾರ್ ಬೇಕಲ್, ಜಗದೀಶ್ ಕುಲಾಲ್, ಶ್ರೀಮತಿ ಯಶೋಧ ದೇವಾಡಿಗ, ಸ್ಫೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು,ಸದಸ್ಯರು, ಸದಸ್ಯೆಯರು,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪರಿಸರ ಸಂರಕ್ಷಣಾ ಕಾರ್ಯದರ್ಶಿ ಸಂಪತ್ ದೇವಾಡಿಗ ಸನ್ಮಾನ ಪತ್ರ ವಾಚಿಸಿದರು.
ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಜಗದೀಶ್ ಕುಲಾಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದೀಪಕ್ ಸುವರ್ಣ ವಂದಿಸಿದರು. ನಿಕಟ ಪೂರ್ವ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *