ಕಾರ್ಕಳ: ತೆಲಂಗಾಣದ ವರಂಗಲ್ ನಲ್ಲಿ ಅ. 15 ರಿಂದ 17 ರವರೆಗೆ ನಡೆದ ದಕ್ಷಿಣ ವಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 18 ವರ್ಷದ ಒಳಗಿನ ವಯೋಮಿತಿಯ 3,000 ಮೀಟರ್ ಓಟದಲ್ಲಿ ಡಾ.ಎನ್.ಎಸ್.ಎ.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ಕಾಮರ್ಸ್ ವಿದ್ಯಾರ್ಥಿನಿ ನಂದಿನಿ ಜಿ ಚಿನ್ನದ ಪದಕವನ್ನು ಪಡೆದಿದ್ದಾರೆ.
20 ವರ್ಷದೊಳಗಿನ ವಯೋಮಿತಿಯ 800 ಮೀಟರ್ ಓಟದಲ್ಲಿ ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಕಂಚಿನ ಪದಕ ಹಾಗೂ 18 ವರ್ಷದ ಒಳಗಿನ ವಯೋಮಿತಿಯ ಜಾವೆಲಿನ್ ಥ್ರೋನಲ್ಲಿ ಡಾ.ಎನ್.ಎಸ್.ಎ.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ಕಾಮರ್ಸ್ ವಿದ್ಯಾರ್ಥಿ ಕುಲದೀಪ್ ಕುಮಾರ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂವರು ಪದಕ ವಿಜೇತರು ಈ ಸಾಧನೆಯಿಂದ ನವೆಂಬರ್ 7 ರಿಂದ 9ರವರೆಗೆ ಕೊಯಮತ್ತೂರಿನಲ್ಲಿ ನಡೆಯಲಿರುವ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಹಾಕಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ರಚನೆ ಮಾಡಿತ್ತು.
ಮದುವೆಯು ಹಲವಾರು ಹಕ್ಕುಗಳು, ಸವಲತ್ತುಗಳು ಮತ್ತು ಕಟ್ಟುಪಾಡುಗಳನ್ನು “ಕಾನೂನಿಂದ ಪಾಲಿಸಲಾಗಿದೆ ಮತ್ತು ರಕ್ಷಿಸುತ್ತದೆ” ಎಂದು ಅರ್ಜಿಗಳು ವಾದಿಸಿದ್ದವು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಆಯೋಗವು (ಆಅPಅಖ) ಈ ರೀತಿಯ ಮದುವೆಗಳನ್ನು ಗುರುತಿಸುವಂತೆ ತಿಳಿಸಿದೆ. ಮಕ್ಕಳ ಮೇಲೆ ಇಂತಹ ವಿವಾಹಗಳ ಪ್ರಭಾವದ ಕುರಿತು ನ್ಯಾಯಾಲಯಕ್ಕೆ ಸಹಾಯ ಮಾಡಲು ಮಧ್ಯಸ್ಥಿಕೆ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು.