ಹೆಬ್ರಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಯುವನೋರ್ವ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಹೆಬ್ರಿ ತಾಲೂಕಿನ ಚಾರ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಚಾರ ಗ್ರಾಮದ ಸಚಿನ್ (35) ಎಂಬವರು ಭಾನುವಾರ ಸಂಜೆ 7.30ರ ವೇಳೆಗೆ ಗದ್ದೆಗೆ ದೀಪವಿಡಲು ಹೋದಾಗ ತನ್ನ ಸಂಬAಧಿಕರ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ದೀಪಾವಳಿಯ ಸಂಭ್ರಮದಲ್ಲಿ ದುರಂತ ಸಂಭವಿಸಿದ್ದು ಇಡೀ ಕುಟುಂಬವೇ ದುಃಖದ ಮಡುವಿನಲ್ಲಿ ಮುಳುಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
——————————————-
ಜೀವನದಲ್ಲಿ ಜಿಗುಪ್ಸೆಗೊಂಡು ಮದ್ಯವ್ಯಸನಿ ನೇಣಿಗೆ ಶರಣು
ಕಾರ್ಕಳ: ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಅತ್ತೂರು ಚೇತನಾ ಹಳ್ಳಿ ನಿವಾಸಿ ಚಂದ್ರಕಾAತ (30) ಎಂಬಾತನು ಅಮಲು ಪದಾರ್ಥ ಸೇವಿಸುವ ಅಭ್ಯಾಸವುಳ್ಳವನಾಗಿದ್ದು, ಇದರಿಂದಾಗಿ ಮಾನಸಿಕವಾಗಿ ನೊಂದು, ಕಳೆದ 5-6 ವರ್ಷಗಳಿಂದ ಕೆಲಸಕ್ಕೆ ಹೋಗದೇ ಕುಡಿತದ ದಾಸನಾಗಿ ಮನೆಯಲ್ಲಿಯೇ ಇದ್ದವನು ಭಾನುವಾರ ರಾತ್ರಿ ತನ್ನ ಮನೆಯ ಸಮೀಪ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ