ಕಾರ್ಕಳ: ಸ್ವಾತಂತ್ರ್ಯ ಬಳುವಳಿಯಿಂದ ಸಿಕ್ಕಿಲ್ಲ ಬದಲಾಗಿ ನೂರಾರು ವರ್ಷಗಳ ಕ್ರಾಂತಿಕಾರಿಗಳ ಚಳುವಳಿ ಬಲಿದಾನದ ಫಲವಾಗಿ ದೇಶವು ದಾಸ್ಯದಿಂದ ಬಂಧಮುಕ್ತವಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳದ ಮಂಜುನಾಥ ಪೈ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆದ 77ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾತಂತ್ರ್ಯದ ಸಂದೇಶ ನೀಡಿ ಮಾತನಾಡಿದರು. ಭಾರತವನ್ನು ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವ್ಯಕ್ತಿ ಶಕ್ತಿಯಾದರೆ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ. ಶಿಕ್ಷಣ ಕೃಷಿ,ಸಾಮಾಜಿಕ,ಧಾರ್ಮಿಕ ಕ್ಷೇತ್ರದಲ್ಲಿ ಅಮೂಲಾಗ್ರ ಅಭಿವೃದ್ದಿ ಸಾಧಿಸಿದಾಗ ದೇಶದ ಅಭಿವೃದ್ದಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ತಹಶೀಲ್ದಾರ್ ಅನಂತಶಂಕರ ಕಾರ್ಕಳ ಪುರಸಭಾ ಮುಖ್ಯ ಅಧಿಕಾರಿ ರೂಪ ಟಿ ಶೆಟ್ಟಿ ಕಾರ್ಕಳ ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ ಎನ್ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಟಿ ಉಪಸ್ಥಿತರಿದ್ದರು




