ನಿತ್ಯ ಪಂಚಾಂಗ :
ದಿನಾಂಕ:02.03.2023, ಗುರುವಾರ, ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಶುಕ್ಲಪಕ್ಷ, ನಕ್ಷತ್ರ:ಆರ್ದ್ರಾ, ರಾಹುಕಾಲ -02:12 ರಿಂದ 03:41 ಗುಳಿಕಕಾಲ-09:46 ರಿಂದ 11:14 ಸೂರ್ಯೋದಯ (ಉಡುಪಿ) 06:49 ಸೂರ್ಯಾಸ್ತ – 06:38
ರಾಶಿ ಭವಿಷ್ಯ:
ಮೇಷ: ಇಲ್ಲ ಸಲ್ಲದ ಯೋಚನೆಗಳಿಲ್ಲದೇ ಮನಸ್ಸು ಶಾಂತವಾಗಲಿದೆ. ಇತರರು ನಿಮ್ಮ ಕುರಿತು ಸಲ್ಲದ ಮಾತುಗಳನ್ನು ಆಡಬಹುದು. ತಪ್ಪುಗಳ ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ. ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಆಪ್ತರ ಭೇಟಿಯಾಗಬಹುದು. ಹಲವು ದಿನಗಳಿಂದ ಹೇಳದೇ ಉಳಿದುಕೊಂಡ ವಿಷಯಗಳನ್ನು ಚರ್ಚಿಸುವಿರಿ. ಆಪ್ತಸಮಾಲೋಚನೆ ನಡೆಯಲಿದೆ. ಉದ್ಯೋಗದಲ್ಲಿ ಮೇಲ್ಮಟ್ಟಕ್ಕೆ ಹೋಗಲಿದ್ದೀರಿ. ಅವರಿಂದ ಸಹಕಾರವೂ ನಿಮಗೆ ಸಿಗುವ ಸಾಧ್ಯತೆ ಇದೆ. ಗುರುವಿನ ದರ್ಶನ, ಆಶೀರ್ವಾದವನ್ನು ಪಡೆಯಿರಿ.
ವೃಷಭ: ದುಶ್ಚಟಕ್ಕೆ ದಾಸರಾಗುವ ಸಾಧ್ಯತೆ ಇದೆ. ನಿಮಗೆ ಇಂದು ಕೆಲವು ಜವಾಬ್ದಾರಿಗಳು ಬರಬಹುದು. ಎಲ್ಲವನ್ನೂ ಶಕ್ತಿಮೀರಿ ಪ್ರಯತ್ನಿಸುವಿರಿ. ಅತಿಯಾದ ನಿದ್ರೆಯಯನ್ನು ಮಾಡುವ ಮನಸ್ಸು ಮಾಡುವಿರಿ. ಆಲಸ್ಯವು ಒಳ್ಳೆಯದಲ್ಲ. ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ಕಲಾವಿದರು ಉತ್ತಮವಾದ ಅವಕಾಶವನ್ನು ಪಡೆಯಲಿದ್ದಾರೆ. ಹಳೆಯ ಖಾಯಿಲೆಯು ಮತ್ತೆ ಮರುಕಳಿಸಬಹುದು. ಹಣಕಾಸಿನಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ. ವ್ಯಾಪಾರದಲ್ಲಿ ಸ್ವಲ್ಪ ಲಾಭವನ್ನು ಕಾಣಬಹುದು. ಕುಲದೇವಿಯನ್ನು ಪ್ರಾರ್ಥಿಸಿ.
ಮಿಥುನ: ಶುಭಕಾರ್ಯಗಳಿಗೆ ಸಮಯವನ್ನು ಕೊಡುವಿರಿ. ಅತಿಯಾದ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು. ಹೊಸ ಕಾರ್ಯವನ್ನು ಮಾಡಲು ಯೋಜನೆಯನ್ನು ರೂಪಿಸಲಿದ್ದೀರಿ. ಆಹಾರದ ಅಭಾವವು ನಿಮಗೆ ಆಗಲಿದೆ. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಭತ್ಯೆಯು ಸಿಗಬಹುದಾಗಿದೆ. ಯಾರಾದರೂ ಚುಚ್ಚಿ ಮಾತನಾಡಬಹುದು. ಅದನ್ನು ಮನಸ್ಸಿ ತೆಗದುಕೊಳ್ಳುವಿರಿ. ಮನಸ್ಸು ನಿಶ್ಚಿಂತೆಯಿಂದ ಇರಲಿದೆ. ವಿಷ್ಣುಸಹಸ್ರನಾಮವನ್ನು ಪಠಿಸಿ.
ಕಟಕ: ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಳ್ಳಿ. ಹೊಸ ಅಭ್ಯಾಸವನ್ನು ಕಲಿಯಲು ಪ್ರಯತ್ನಪಡುವಿರಿ. ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಆಸಕ್ತಿಯನ್ನು ಹೊಂದಿದ್ದೀರಿ. ಮಕ್ಕಳಿಂದ ನಿಮಗೆ ಸಂತೋಷಕರವಾದ ವಾರ್ತೆಯು ಸಿಗಲಿದೆ. ಉದ್ಯೋಗವನ್ನು ಬಿಡುವ ಮನಸ್ಸು ಮಾಡುವಿರಿ. ಯಾವುದಾದರೂ ಸುಂದರ ಪ್ರದೇಶಕ್ಕೆ ಹೋಗಬೇಕಾಗಿಬರಬಹುದು. ನಿರಂತರ ಶ್ರಮದ ಫಲವನ್ನು ನೀವಿಂದು ಪಡೆಯುವಿರಿ. ಆಲಸ್ಯವನ್ನು ಬಿಟ್ಟು ಮುನ್ನಡೆಯುವ ತೀರ್ಮಾನವನ್ನು ಮಾಡಲಿದ್ದೀರಿ. ಕೃಷಿಯನ್ನು ಇಷ್ಟಪಟ್ಟು ಮಾಡಲಿದ್ದೀರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ಚತುರ್ಥದ ಕೇತುವು ನಿಮ್ಮ ಮನೆಯಲ್ಲಿ ಕಲಹವಾಗುವಂತೆ ಮಾಡಿಯಾನು. ಕುಲದೇವರ ಸನ್ನಿಧಿಗೆ ಹೋಗಿ ಪ್ರಾರ್ಥಿಸಿ.
ಸಿಂಹ: ಅಪರೂಪದ ಬಂಧುಗಳ ಆಗಮನವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ತನಗೆ ಬೇಕಾದುದನ್ನು ಬೇಟೆಯಾಡಲೇ ಬೇಕು. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಇಂದಿನ ಕೆಲಸವನ್ನು ಮುಂದೂಡುವುದು ಒಳ್ಳೆಯದು. ಮನೆಯಿಂದ ದೂರವಿರುವವರಿಗೆ ಮನೆಯ ನೆನಪಾಗಲಿದೆ. ತನ್ನವರನ್ನು ಕಳೆದುಕೊಳ್ಳುವ ಹೆದರಿಕೆ ಉಂಟಾಗಲಿದೆ. ಸದಾಚಾರವನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಅನಾರೋಗ್ಯವು ನಿಮ್ಮ ನಿಷ್ಕಾಳಜಿಯಿಂದ ಹೆಚ್ಚಾಗಲಿದೆ. ನವಮದ ರಾಹುವು ಎಂದೋ ಮಾಡಿದ ದುಷ್ಕರ್ಮಕ್ಕೆ ಫಲ ನೀಡುವನು. ನಾಗಾರಾಧನೆಯಿಂದ ಶುಭವಿರಲಿದೆ.
ಕನ್ಯಾ: ಕುಟುಂಬದ ಜೊತೆ ದೇವಾಲಯ ಹಾಗೂ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ಆಯ್ಕೆ ಮಾಡಿಕೊಳ್ಳುವುದು ಕಷ್ಟವಾದೀತು. ಅಧಿಕ ಸುತ್ತಾಟದ ಸುಸ್ತು ನಿಮ್ಮಲ್ಲಿ ಇರಲಿದೆ. ಹಿರಿಯರ, ಅನುಭವಿಗಳ ಮಾರ್ಗದರ್ನವನ್ನು ಪಡೆಯಿರಿ. ಶ್ರಮದ ಕೆಲಸವು ಆಯಾಸವನ್ನು ತರಲಿದೆ. ಅತಿಯಾದ ಆಲಸ್ಯದಿಂದ ನಿದ್ರಿಸುವ ಮನಸ್ಸಿನಲ್ಲಿ ಇರುವಿರಿ. ಯಾರೂ ನನಗೆ ಸಹಾಯಕ್ಕೆ ಬರಲಾರರು ಎಂಬ ಅನಾಥ ಪ್ರಜ್ಞೆಯನ್ನು ನೀವು ಹೊಂದುವಿರಿ. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇರುವಿರಿ. ನಿಮ್ಮ ವಾಹನದ ದುರಸ್ತಿಯನ್ನು ಇಂದು ಮಾಡಲಿದ್ದೀರಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು. ಎಂಟರ ರಾಹುವು ಶತ್ರುಗಳ ಕಾಟದಿಂದ ಮುಕ್ತಿಯನ್ನು ಕೊಡಿಸುವನು.
ತುಲಾ: ವಿದ್ಯಾರ್ಥಿಗೆಳಿಗೆ ಗೊಂದಲದ ವಾತಾವರಣ ಇರಲಿದೆ. ಕಳ್ಳತನದ ಅಪವಾದವು ಬರಬಹುದು. ನಿಮ್ಮ ಮೇಲಧಿಕಾರಿಗಳನ್ನು ಚೆನ್ನಾಗಿ ಇರಿಸಿಕೊಳ್ಳಿ. ಅನಿರೀಕ್ಷಿತ ಧನಲಾಭವನ್ನು ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ವ್ಯಕ್ತಿಗಳನ್ನು ದೂರುವ ಸ್ವಭಾವವನ್ನು ಬಿಟ್ಟುಬಿಡಿ. ಆಂತರಿಕ ಕಲಹವು ಇಂದು ಜಗಜ್ಜಾಹಿರವು ಆಗಬಹುದು. ಇಂದಿನ ನಿಮ್ಮ ವಾಸಸ್ಥಾನವು ಮನೆಯಿಂದ ದೂರವಿರಲಿದೆ. ವಸ್ತ್ರಗಳ ಖರೀದಿಯಲ್ಲಿ ನೀವು ಮಗ್ನರಾಗಿರುತ್ತೀರಿ. ನಿಮ್ಮ ಬೆಳವಣಿಗೆಯನ್ನು ಕಂಡು ಮನೆಯಲ್ಲಿ ಸಂತಸಗೊಳ್ಳಬಹುದು. ನಿಮ್ಮ ರಾಶಿಯಲ್ಲಿ ಇರುವ ಕೇತುವು ನಿಮ್ಮ ದೇಹಬಾಧೆಯನ್ನು ಹೆಚ್ಚಿಸುವನು. ಧನ್ವಂತರಿಯ ಸ್ತೋತ್ರ ಮಾಡಿ.
ವೃಶ್ಚಿಕ: ನ್ಯಾಯಾಲಯದ ಮೆಟ್ಟಿಲೇರಿದ ದೂರು ತೀರ್ಮಾನವಾಗಲು ವಿಳಂಬವಾಗಬಹುದು. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ. ವಿವಾಹವು ಯೋಜನೆಗೊಳ್ಳದೇ ಬೇಸರವಾಗಿ ಮನೆಯಲ್ಲಿ ಕಲಹಗಳು ಆಗಬಹುದು. ನಿಮ್ಮ ಮಾತಿನಿಂದ ಮನೆಯವರಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗಲಿದೆ. ನಿಮಗೆ ಅನುಕೂಲಕರ ಮನೆಯಿಂದ ದೂರವಿರುವ ಆಲೋಚನೆಯನ್ನು ಮಾಡುವಿರಿ. ಭೂಮಿಯ ವ್ಯವಹಾರದಲ್ಲಿ ಅಲ್ಪಲಾಭವು ಆಗಲಿದೆ. ಮನೆಯನ್ನು ಇಂದು ಬದಲಾಯಿಸುವಿರಿ. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮಿತ್ರರಿಂದ ವಂಚನೆಯಾಗಬಹುದು. ಮಾನಸಿಕ ಧೈರ್ಯಕ್ಕೆ ದೇವಸೇನಾನಾಯಕ ಕಾರ್ತಿಕೇಯನನ್ನು ಸ್ಮರಿಸಿ.
ಧನು: ಹೊಸ ಉದ್ಯೋಗಕ್ಕೆ ಸಂಬಂಧಿಸಿದಂತೆ ಗೊಂದಲಗಳು ಏಳಬಹುದು. ಸಾಹಿತಿಗಳೋ ಕವಿಗಳೋ ಆಗಿದ್ದರೆ ನಿಮಗಿಂದು ಗೌರವ, ಸಮ್ಮಾನಗಳು ಸಿಗಲಿವೆ. ಮೇಲಿನಿಂದ ಬಿದ್ದು ಪೆಟ್ಟುಮಾಡಿಕೊಳ್ಳುವಿರಿ. ನೀವಿಂದು ಪ್ರೀತಿಸಲು ಆರಂಭಿಸುವಿರಿ. ಅವಸರದಲ್ಲಿ ಅನಾಹುತವಾದೀತು. ಅಧಿಕ ಖರ್ಚಾಗುವುದನ್ನು ನಿಲ್ಲಿಸಲಿದ್ದೀರಿ. ಧಾರ್ಮಿಕಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮ ವ್ಯಕ್ತಿತ್ವವನ್ನು ಕಂಡು ಕೆಲವರು ಸಲಹೆಗಳನ್ನು ಕೊಡಲು ಬರಬಹುದು. ದೈವೀಸಂಪತ್ತಿಗೆ ಆಸೆಪಡಲಿದ್ದೀರಿ. ಜಾಗರೂಕರಾಗಿರಿ. ಯಾವುದೇ ಪ್ರತ್ಯುತ್ತರಗಳನ್ನು ಕೊಡಲು ಹೋಗಬೇಡಿ. ಸಮಾಧಾನದಿಂದ ಆಲೋಚಿಸಿ. ತೃತೀಯದಲ್ಲಿರುವ ಶನಿಯು ನಿಮ್ಮ ಪರಾಕ್ರಮವನ್ನೂ ಬುದ್ಧಿಶಕ್ತಿಯನ್ನೂ ಹೆಚ್ಚಿಸುವನು.
ಮಕರ: ಮಹಿಳಾ ಉದ್ಯೋಗಿಯಾಗಿದ್ದರೆ ನೀವು, ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ. ನೀವಿಂದು ಬದಲಾವಣೆಯನ್ನು ಇಷ್ಟಪಡುತ್ತೀರಿ. ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ದೂರಪ್ರಯಾಣದಲ್ಲಿ ನಿಮಗೆ ನಾನಾ ತೊಂದರೆಗಳು ಎದುರಾಗಬಹುದು. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ನೆಮ್ಮದಿಯನ್ನು ಪಡೆಯಲು ಕಷ್ಟಪಡುವಿರಿ. ಎಂದೋ ಮಾಡಿದ ಇಂದು ನಿಮ್ಮ ಆಪತ್ತಿಗೆ ಬರಲಿದೆ. ಸತ್ಯವನ್ನು ಮುಚ್ಚಿಡಲು ಹೋಗಬೇಡಿ. ಮುಂದೆ ಅದೇ ದೊಡ್ಡ ಕಂಟಕವಾದೀತು. ದ್ವಿತೀಯದಲ್ಲಿರುವ ಶನಿಯು ನಿಮಗೆ ಶುಭವನ್ನು ಮಾಡುವನು, ಶನಿಯ ಸ್ತೋತ್ರ ಮಾಡಿ.
ಕುಂಭ: ಕುಂಟುತ್ತ ಸಾಗುತ್ತಿದ್ದ ಸರ್ಕಾರಿ ಕೆಲಸದಲ್ಲಿ ವೇಗವಿರಲಿದೆ. ಅಕಾರ್ಯಕ್ಕೆ ಧನವು ವ್ಯಯವಾಗಬಹುದು. ಪುತ್ರೋತ್ಸವವು ನಿಮ್ಮ ನೆಮ್ಮದಿಯನ್ನು ಇಮ್ಮಡಿಗೊಳಿಸುವುದು. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಮಾತಿಗೆ ಬೆಲೆಯು ಕಡಿಮೆಯಾದೀತು. ಬಲವಂತವಾಗಿ ಯಾರನ್ನೂ ನಿಮ್ಮವರನ್ನಾಗಿ ಮಾಡಿಕೊಳಗಳಬೇಡಿ. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ. ಸಂಗತಿಯ ಜೊತೆ ಹೆಚ್ಚು ಕಾಲವನ್ನು ಕಳೆಯುವಿರಿ. ಮನಸ್ಸು ಭಾರವಾಗಲಿದೆ.
ಮೀನ: ಇಂದು ನಿಮ್ಮ ಪರೀಕ್ಷೆಯ ಕಾಲ. ಅದಕ್ಕೆ ಯೋಗ್ಯವಾದ ಉತ್ತರವನ್ನು ಕೊಡುವ ಭರದಲ್ಲಿ ಅವಘಡಗಳು ಆಗಬಹುದು. ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳಿವೆ. ಸಹಾಯಕ್ಕೆ ಯಾರನ್ನಾದರೂ ನೀವು ಯಾವುದನ್ನು ಆರಿಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗಲಿದೆ. ಸಂಗಾತಿಯ ಜೊತೆ ಕಾಲವನ್ನು ಕಳೆದರೂ ತಂದೆ-ತಾಯಿಯರ ಜೊತೆಗೂ ಕೆಲವು ಕಾಲ ಕಳೆಯಿರಿ. ಅವರ ನೋವು ಮತ್ತು ನಲಿವಿನಲ್ಲೂ ಭಾಗಿಯಾಗಿ. ಅಚ್ಚರಿಯ ಸುದ್ದಿಗಳು ನಿಮಗಾಗಿ ಇರಲಿವೆ. ತಂದೆಯ ಕಾರಣಕ್ಕಾಗಿ ಧನವನ್ನು ವ್ಯಯಿಸುವಿರಿ. ಮೃತ್ಯುಂಜಯನನ್ನು ಜಪಿಸಿ.