ಕಾರ್ಕಳ: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಅಂಬಾಡಗಿ ನಿವಾಸಿ ವಿಠಲ ಆಚಾರ್ಯ (5 7) ಎಂಬವರು ಡಿ 12 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಮನೆಯಿಂದ ಪಿಲಾರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೆಲಸಕ್ಕೆಂದು ಹೋದವರು ಬಳಿಕ ಅಲ್ಲಿಂದ ತನಗೆ ತುರ್ತಾಗಿ ಬೇರೆ ಕೆಲಸ ಇರುವುದಾಗಿ ಹೇಳಿ ಅವರ ಮಾಲಕರಲ್ಲಿ ತಿಳಿಸಿ ಹೋದವರು ಇದುವರೆಗೂ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ