Share this news

ಕಾರ್ಕಳ: ನಂದಳಿಕೆ ಗ್ರಾಮದ ಮೂಡುಮನೆ ಎಂಬಲ್ಲಿನ ನಿವಾಸಿ ಸುಧಾಕರ ರಾವ್ ಎಂಬವರ ಮನೆಗೆ ಮಂಗಳವಾರ ತಡರಾತ್ರಿ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿ ಇರಿಸಿದ್ದ 24 ಪವನ್ ತೂಕದ ಕರಿಮಣಿ ಸರ, ನೆಕ್ಲೇಸ್, ಕಿವಿಯೋಲೆ,ಮಕ್ಕಳ ಚೈನ್ ಸೇರಿದಂತೆ 5 ಲಕ್ಷ ಮೌಲ್ಯದ ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.ಇದರ ಜತೆತೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ 3 ಸಾವಿರ ನಗದು ದೋಚಿದ್ದಾರೆ.ಈ ಕುರಿತು ಸುಧಾಕರ್ ರಾವ್ ಠಾಣೆಗೆ ದೂರು ನೀಡಿದ್ದು,ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *