ಕಾರ್ಕಳ : ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನ ಕಟ್ಟೆ ಬಳಿಯ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಾರೊಂದು ಓವರ್ಟೇಕ್ ಮಾಡುವ ಭರದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ರಾಹುಲ್ ಡಿ.ಕೆ ಎಂಬವರು ತನ್ನ ಸ್ಕೂಟರ್ ನಲ್ಲಿ ಕೀರ್ತನ ಎಂಬವರೊಂದಿಗೆ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಗೋವಿಂದ ಎಂಬುವರ ಕಾರು ಸ್ಕೂಟರನ್ನು ಓವರ್ಟೇಕ್ ಮಾಡುವಾಗ ಸ್ಕೂಟರ್ ಗೆ ಡಿಕ್ಕಿ
ಪರಿಣಾಮ ಸ್ಕೂಟರ್ ಸವಾರ ರಾಹುಲ್ ಹಾಗೂ ಸಹ ಸವಾರೆ ಕೀರ್ತನ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ರಾಹುಲ್ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಹಸವಾರೆ ಕೀರ್ತನ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ .
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.