ಕಾರ್ಕಳ : ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಮಹಿಳೆಯ ಕೈ ಬಸ್ಸಿನ ರಾಡ್ ಮಧ್ಯದಲ್ಲಿ ಸಿಲುಕಿಕೊಂಡು ಕೈ ಬೆರಳು ಮುರಿದಿರುವ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕರಿಮಾರ್ ಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ನಲ್ಲೂರು ಗ್ರಾಮದ ಶ್ರೀಮತಿ ಚಂದ್ರಕಲಾ (42 ವರ್ಷ) ಗಾಯಗೊಂಡವರು. ಅವರು ಅಂಗನವಾಡಿಯ ಟೀಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅಂಗನವಾಡಿಗೆ ಹೋಗಲೆಂದು ಶುಕ್ರವಾರ ಬೆಳಿಗ್ಗೆ ಮುಡಾರು ಗ್ರಾಮದ ಬಜಗೋಳಿಯ ಬಸ್ಸು ನಿಲ್ದಾಣದಲ್ಲಿ ಬಸ್ಸನ್ನು ಹತ್ತಿ ಕರಿಮಾರ್ ಕಟ್ಟೆ ಎಂಬಲ್ಲಿ ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಬಸ್ಸಿನ ಚಾಲಕ ಚಂದ್ರಕಲಾ ಅವರನ್ನು ಗಮನಿಸದೆ ಬಸ್ಸನ್ನು ಚಲಾಯಿಸಿದ ಪರಿಣಾಮ ಚಂದ್ರಕಲಾ ಅವರು ಬಸ್ಸಿನ ಬಾಗಿಲ ಬಳಿಯಲ್ಲಿ ಆಧಾರಕ್ಕಾಗಿ ಹಿಡಿದುಕೊಂಡಿದ್ದ ರಾಡ್ ಗೆ ಕೈ ಸಿಲುಕಿಕೊಂಡಿದ್ದರ ಪರಿಣಾಮ ಅವರ ಕೈ ಬೆರಳು ಮುರಿದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

