Share this news

ಬೆಂಗಳೂರು: ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಪಕ್ಷದ ಸಾಂಸ್ಥಿಕ ಬದಲಾವಣೆ ನಡೆಸುವುದಕ್ಕೆ ಬಿಜೆಪಿ ವರಿಷ್ಠರು ಬಹುತೇಕ ಒಪ್ಪಿಗೆ ನೀಡಿದ್ದು,ದಸರಾ ಸಂದರ್ಭದಲ್ಲೇ ಹೊಸ ರಾಜ್ಯಾಧ್ಯಕ್ಷರ ನೇಮಕ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆ ಕುರಿತಂತೆ ಕೆಲವು ಸಂದೇಶಗಳು ರವಾನೆಯಾಗಿದ್ದು, ಈಗಾಗಲೇ ಶಿಫಾರಸ್ಸು ಆಗಿರುವ ಹೆಸರುಗಳನ್ನು ಹೈಕಮಾಂಡ್ ರಹಸ್ಯವಾಗಿಟ್ಟಿದೆ. ಆದರೆ ಮೂಲಗಳ ಪ್ರಕಾರ ಲಿಂಗಾಯತ ಸಮುದಾಯದವರೇ ರಾಜ್ಯಾಧ್ಯಕ್ಷ ರಾಗುವ ಸಾಧ್ಯತೆ ಹೆಚ್ಚಿದ್ದರೂ ಒಕ್ಕಲಿಗ, ಹಿಂದುಳಿದ ವರ್ಗ ಸಮುದಾಯಕ್ಕೆ ಸೇರಿದವರೂ ರಾಜ್ಯಾಧ್ಯಕ್ಷರಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಅಕ್ಟೋಬರ್ 19 ಅಥವಾ 20ರಂದು ನೇಮಕ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಾಜ್ಯಾಧ್ಯಕ್ಷರ ಜತೆಗೆ ಕೆಲವು ಪ್ರಧಾನ ಕಾರ್ಯದರ್ಶಿಗಳ ನೇಮಕವೂ ನೇಮಕವೂ ನಡೆಯುವ ಸಾಧ್ಯತೆಯಿದೆ ಇದೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭಿಸಿದೆ.

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *