ಬೆಳಗಾವಿ:ಜಾತಿಗಣತಿ ಕುರಿತ ಕಾಂತರಾಜು ವರದಿಯ ಮೂಲಪ್ರತಿಗಳು ಕಾಣೆಯಾಗಿರುವುದನ್ನು ಸರ್ಕಾರವೇ ಹುಡುಕಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿ ಮೂಲಪ್ರತಿ ಕಂಪ್ಯೂಟರ್ ನಲ್ಲಿ ಇದ್ದೆ ಇರುತ್ತದೆ. ಅದನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಜಾತಿಗಣತಿ ಯೋಜನೆ ಜಾರಿಯಾಗಬಾರದು ಎನ್ನುವವರು ಸಾಮಾಜಿಕವಾಗಿ ಯೋಚನೆ ಮಾಡಬೇಕು ಎಂದರು.
ಸAವಿಧಾನದ ಪ್ರಕಾರ ಜಾತಿಗಣತಿ ಮಾಡಲು ಬರುವುದಿಲ್ಲ. ಯಾವ ಜಾತಿಯವರು ಎಷ್ಟು ಜನ ಇದ್ದಾರೆ. ಜಾತಿ, ಸಾಮಾಜಿಕ, ಆರ್ಥಿಕವಾಗಿ ಎಲ್ಲವನ್ನೂ ಇಟ್ಟುಕೊಂಡು ಕಾಂತರಾಜು ವರದಿ ಮಾಡಿದ್ದಾರೆ.ಇದರಲ್ಲಿ ಸ್ವಾಭಾವಿಕವಾಗಿ ಯಾವ ಯಾವ ಜಾತಿ ಹಿಂದುಳಿದಿವೆ. ಅವುಗಳ ಪರಿಸ್ಥಿತಿ ಏನಿದೆ ಎನ್ನುವ ಪರಿಸ್ಥಿತಿ ಹೊರಗಡೆ ಬರುತ್ತದೆ. ಅದು ಬಂದ ಮೇಲೆ ನಮ್ಮ ಅಸ್ಥಿತ್ವ ಏನು ಎಂಬುವುದು ಕೆಲವರಿಗೆ ಪ್ರಶ್ನೆ ಉದ್ಬವವಾಗಿರಬಹುದು. ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ ಎಂದರು.
ಇದಲ್ಲದೇ ಜಾತಿಗಣತಿ ವರದಿಯ ವಿಚಾರವಾಗಿ ಸರ್ಕಾರದಲ್ಲೇ ಅಪಸ್ವರ ಕೇಳಿಬಂದಿದೆ. ಡಿಕೆ ಶಿವಕುಮಾರ್ ಬಣ ಜಾತಿಗಣತಿ ವರದಿಯನ್ನು ವಿರೋಧಿಸಿದರೆ ಸಿಎಂ ಸಿದ್ದರಾಮಯ್ಯ ಈ ವರದಿಯನ್ನು ಜಾರಿ ಮಾಡಿಯೇ ಸಿದ್ದ ಎಂದು ಹಠಕ್ಕೆ ಬಿದ್ದಿದ್ದು ಈ ಸರ್ಕಾರ ಎಷ್ಟು ದಿನ ನಡೆಯಲಿದೆ ಎನ್ನುವುದೇ ಪ್ರಶ್ನೆಯಾಗಿದೆ ಎಂದರು.