ಕಾರ್ಕಳ: ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಯ ಜತೆಜತೆಗೆ ಇಂದು ನೇರ ಮಾರುಕಟ್ಟೆ ವ್ಯವಸ್ಥೆಯು ಕೂಡ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಲಾಂಭಾAಶವು ವಿತರಕರ ಹಾಗೂ ಮಾರಾಟಗಾರರ ಪಾಲಾದರೆ, ನೇರ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಲಾಭಾಂಶ ಸಿಗುವ ಮೂಲಕ ಕಂಪೆನಿಯ ಜತೆಗೆ ಗ್ರಾಹಕ ತನ್ನ ಬದುಕನ್ನು ಕೂಡ ಕಟ್ಟಿಕೊಳ್ಳಲು ಅವಕಾಶವಿದೆ ಎನ್ನುವ ಉದ್ದೇಶವನ್ನಿಟ್ಟುಕೊಂಡು ರಾಜ್ಯದ ಉತ್ತರ ಭಾಗದಲ್ಲಿ ಈಗಾಗಲೇ ಪ್ರಸಿದ್ದಿಯಾಗಿರುವ EMWI ಎನ್ನುವ ನೇರ ಮಾರಾಟದ ಕಂಪೆನಿಯು ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಕಾರ್ಕಳದಲ್ಲಿ ತನ್ನ ಮೊದಲ ಔಟ್‌ಲೆಟ್ ಆರಂಭಿಸುತ್ತಿದೆ. ಕಂಪೆನಿಯ ಉತ್ಪನ್ನಗಳನ್ನು ಮಧ್ಯವರ್ತಿಗಳು ಇಲ್ಲದೇ ನೇರವಾಗಿ ಗ್ರಾಹಕರಿಗೆ ತಲುಪಿಸುವ ಗುರಿಯೊಂದಿಗೆ ಇಎಂವಿ ಕಂಪೆನಿಯು ತನ್ನ ಔಟ್‌ಲೆಟ್ ಆರಂಭಿಸುತ್ತಿದ್ದು, ಜ.18ರಂದು ಗುರುವಾರ ಕಾರ್ಕಳದ ಕಲ್ಲೊಟ್ಟೆ ಎಂಬಲ್ಲಿ ಇಎಂವಿ ಕಂಪೆನಿಯ ಸುಸಜ್ಜಿತ ಮಳಿಗೆ ಶುಭಾರಂಭಗೊಳ್ಳಲಿದೆ.
ಕಾರ್ಕಳ ಶಾಸಕರು ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ನೂತನ ಮಳಿಗೆಯನ್ನ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಇಎಂವಿ ಕಂಪ;ಎನಿಯ ವೆಲ್‌ನೆಸ್ ಸಮಾಲೋಚಕ ಡಾ.ಎಸ್.ಎಚ್.ಕುಲಕರ್ಣಿ, ಕಾರ್ಕಳ ಕೆಎಂಇಎಸ್ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮ್ಮದ್, ಪುರಸಭಾ ಸದಸ್ಯ ಅಶ್ಪಕ್ ಅಹಮ್ಮದ್,ನ್ಯಾಯವಾದಿ ಮಣಿರಾಜ ಶೆಟ್ಟಿ, EMWI ಕಂಪೆನಿಯ ತರಬೇತುದಾರ ಸಂಜಯ್ ಜಿ.ವಿ ಹಾಗೂ ಹಾವೇರಿಯ ಸಾಮಾಜಿಕ ಕಾರ್ಯಕರ್ತ ಕಿರಣ್ ಕುಮಾರ್ ಭಾಗವಹಿಸಲಿದ್ದಾರೆ ಎಂದು EMWI ಕಂಪೆನಿಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಸಯ್ಯದ್ ಮುಜೀಬ್ ತಿಳಿಸಿದ್ದಾರೆ.
ಜನರ ಒತ್ತಡದ ಜೀವನಕ್ಕೆ ಪರಿಹಾರ ಕಂಡುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡುವ ಗುರಿಯೊಂದಿಗೆ ಈ ಕಂಪೆನಿಯು ಸುಮಾರು 65ಕ್ಕೂ ಮಿಕ್ಕಿದ ವೆಲ್‌ನೆಸ್ ಸ್ವದೇಶಿ ಉತ್ಪನ್ನಗಳನ್ನು ಪರಿಚಯಿಸುತ್ತಿದೆ. ಗ್ರಾಹಕರಿಗೆ ನೈಸರ್ಗಿಕವಾಗಿ ಸಿಗುವ ಹಣ್ಣುಹಂಪಲುಗಳಿAದ ತಯಾರಿಸಿದ ವೆಲ್‌ನೆಸ್ ಉತ್ಪನ್ನಗಳ ಜತೆಗೆ ರಾಸಾಯನಿಕರಹಿತ ಬಾಡಿವಾಶ್, ಸ್ಕಿನ್ ಕೇರ್ ಕೂಡ ಲಭ್ಯವಿದೆ ಇದಲ್ಲದೇ ಪುರುಷರ ಹಾಗೂ ಮಹಿಳೆಯರ ವಿವಿಧ ಬಗೆಯ ಬಟ್ಟೆಗಳು ಹಾಗೂ ಸೂಟ್ ಸೇರಿದಂತೆ ಗುಣಮಟ್ಟದ ಬ್ರಾಂಡೆಡ್ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದೆ. ಪ್ರಮುಖವಾಗಿ EMWI ಕಂಪೆನಿ ಯಾವುದೇ ವಿತರಕ ಅಥವಾ ಡೀಲರ್ ಗಳನ್ನು ನೇಮಿಸದೇ ಕಂಪೆನಿಯು ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಲಾಭಾಂಶವನ್ನು ಗ್ರಾಹಕರಿಗೆ ನೀಡುವ ಗುರಿಯೊಂದಿಗೆ ಆರಂಭಗೊಳ್ಳುತ್ತಿದೆ. ಈಗಾಗಲೇ ಕರ್ನಾಟಕದಾದ್ಯಂತ ಸಾವಿರಾರು ಜನರು EMWI ಕಂಪೆನಿಯ ಪ್ರಮೋಟರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಕಂಪೆನಿಯ ಬೆಳವಣಿಗೆಯ ಜತೆಜತೆಗೆ ತಾವೂ ಕೂಡ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ ಎಂದು ಕಳೆದ 9 ವರ್ಷಗಳಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಯ್ಯದ್ ಮುಜೀಬ್ ಹೇಳಿದ್ದಾರೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ