ಬೆಳಗಾವಿ : ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ ಆಗಲು ಲಕ್ಷ್ಮಣ್ ಸವದಿ ಕಾರಣ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಲಕ್ಷ್ಮಣ ಸವದಿಯೇ ಕಾರಣ, ಲಕ್ಷ್ಮಣ್ ಸವದಿ ಶಕುನಿ ಕೆಲಸ ಮಾಡಿದ್ದಾನೆ. ಬಿ.ಎಸ್. ಯಡಿಯೂರಪ್ಪ ಮತ್ತು ಹೈಕಮಾಂಡ್ ನಡುವೆ ಕಂದಕ ಸೃಷ್ಟಿ ಮಾಡಿ ಬಿ.ಎಸ್. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಒಳ್ಳೆಯ ಉದ್ದೇಶಕ್ಕಾಗಿ ಲಕ್ಷ್ಮಣ್ ಸವದಿಯನ್ನು ಡಿಸಿಎಂ ಮಾಡಲಾಗಿತ್ತು. ಆತ ಪಂಚಾಯಿತಿಗೂ ಲಾಯಕ್ ಇಲ್ಲ ಅಂತ ಅವರಿಗೆ ಗೊತ್ತಿರಲಿಲ್ಲ. ಉದ್ದ ಅಂಗಿ ಹಾಕಿಕೊಂಡು ಬರುತ್ತಿದ್ದಕ್ಕೆ ದೊಡ್ಡವನು ಅಂತಾ ತಿಳಿದಿದ್ದರು. ಬಿಜೆಪಿ ನಾಯಕರಿಗೆ ಲಕ್ಷ್ಮಣ್ ಸವದಿ ಮೋಸ ಮಾಡಿದ್ದಾನೆ. ಶಕುನಿ ಕೆಲಸ ಮಾಡಿ ಬಿ.ಎಸ್. ಯಡಿಯೂರಪ್ಪ, ಹೈಕಮಾಂಡ್ ನಡುವೆ ವೈಮನಸ್ಸು ಮೂಡುವಂತೆ ಮಾಡಿದ್ದಾನೆ. ಬಿಜೆಪಿಯಲ್ಲಿ ಲಕ್ಷ್ಮಣ್ ಸವದಿಗೆ ಏನು ಅನ್ಯಾಯವಾಗಿದೆ. ಮಹೇಶ್ ಕಮಟಳ್ಳಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.