ಕರಾವಳಿನ್ಯೂಸ್ ಸಿನಿಡೆಸ್ಕ್
ಇತ್ತೀಚಿನ ಕೆಲವು ವರ್ಷಗಳಿಂದ ತುಳುಚಿತ್ರರಂಗವು ಹಾಲಿವುಡ್ ಬಾಲಿವುಡ್ ರೇಂಜಿಗೆ ಬೆಳೆಯುತ್ತಿದ್ದು ತುಳುವರಿಗೆ ವಿಭಿನ್ನ ಅಭಿರುಚಿ ನೂರಾರು ಚಿತ್ರಗಳನ್ನು ನೀಡಿದೆ.ತುಳು ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿರುವ ಗಿರಿಗಿಟ್ ಚಿತ್ರತಂಡದ ಮತ್ತೊಂದು ಸೂಪರ್ ಹಿಟ್ ಚಿತ್ರವು ಶುಕ್ರವಾರ ಬಿಡುಗಡೆಯಾಗಲಿದೆ. ಇದೀಗ ತುಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ ರೂಪೇಶ್ ಶೆಟ್ಟಿಯವರ ನಿರ್ದೇಶನ ಹಾಗೂ ನಟನೆಯ ಸರ್ಕಸ್ ಎನ್ನುವ ತುಳು ಚಲನಚಿತ್ರವು ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಿದ್ದವಾಗಿದ್ದು ಜೂನ್ 23ರಂದು ಶುಕ್ರವಾರ ರಾಜ್ಯದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ನಿರ್ದೇಶಕ ರೂಪೇಶ್ ಶೆಟ್ಟಿ ಕನ್ನಡದಲ್ಲಿ ಗೋವಿಂದಾ ಗೋವಿಂದಾ ಸಹಿತ ಐದು ಸಿನಿಮಾದಲ್ಲಿ ನಟಿಸಿದ್ದಾರೆ.ಪ್ರತೀ ಚಿತ್ರದಲ್ಲಿಯೂ ಹೊಸತನ ಬಯಸುವ ರೂಪೇಶ್ ಶೆಟ್ಟಿ ಈ ಬಾರಿ ಕೂಡಾ ಒಂದು ಉತ್ತಮ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಗಿರಿಗಿಟ್, ಗಮ್ಜಾಲ್ ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಸರ್ಕಸ್ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದಾರೆ. ಸರ್ಕಸ್ ಚಿತ್ರವು ಹೊಸಹೊಸ ಕಲಾವಿದರಿಗೆ ವೇದಿಕೆಯಾಗುತ್ತಿದ್ದು, ಸಲಗ ಖ್ಯಾತಿಯ ಯಶ್ ಶೆಟ್ಟಿ ಸರ್ಕಸ್ ಮೂಲಕ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದರ ಜತೆಗೆ ಯುವನಟಿ ರಚನಾ ರೈ ಎಂಬ ನಟಿಯನ್ನು ರೂಪೇಶ್ ಶೆಟ್ಟಿ ತುಳು ಸಿನಿಮಾ ರಂಗಕ್ಕೆ ಪರಿಚಯಿಸಿದ್ದಾರೆ. ಉಳಿದಂತೆ ತುಳು ಚಿತ್ರರಂಗದ ಘಟಾನುಘಟಿ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಈ ಹಿಂದೆ ಬಿಡುಗಡೆಗೊಂಡ ಗಿರಿಗಿಟ್ ತುಳು ಸಿನಿಮಾ ಅತ್ಯಂತ ಯಶಸ್ವಿಯಾದ ಹಾಸ್ಯಮಯ ಚಿತ್ರ ಹಲವು ದೇಶಗಳಲ್ಲಿ ಗಿರಿಗಿಟ್ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಂಡು ಭರ್ಜರಿ ಯಶಸ್ಸು ಗಳಿಸಿತ್ತು, ಇದೀಗ ಈಗ ಅದೇ ತಂಡ ಸರ್ಕಸ್ ಸಿನಿಮಾ ಮೂಡುವ ಮೂಲಕ ಸಕ್ಸಸ್ ಹಾದಿಯಲ್ಲಿ ಸಾಗಿದೆ.
ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ಸಿನಿಮಾ ತಯಾರಾಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ.ರಾಕೇಶ್ ಕದ್ರಿ ಕ್ರಿಯೆಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಕರಾವಳಿಯಾದ್ಯಂತ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆದಿದ್ದು, ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮರಾ, ರಾಹುಲ್ ವಶಿಷ್ಠ ಸಂಕಲನ, ಲೋಯ್ ಸಂಗೀತ ನಿದೇಶಕರಾಗಿದ್ದಾರೆ.
ಗಿರಿಗಿಟ್ ಸಿನಿಮಾ ಬಳಿಕ ರೂಪೇಶ್ ಶೆಟ್ಟಿ ನಿರ್ದೇಶನದ ಎರಡನೇ ಸಿನಿಮಾ ಇದಾಗಿದ್ದು, ಈಗಾಗಲೇ ಭರ್ಜರಿ ಪ್ರಚಾರ ನಡೆಸಲಾಗುತ್ತಿದ್ದು,ಸರ್ಕಸ್ ಚಿತ್ರವನ್ನು ಸಹೃದಯೀ ತುಳುನಾಡಿನ ಪ್ರೇಕ್ಷಕರು ಸಕ್ಸಸ್ ಮಾಡಬೇಕೆಂದು ಚಿತ್ರತಂಡ ವಿನಂತಿಸಿಕೊAಡಿದೆ.