ಕಾರ್ಕಳ: ಅಜೆಕಾರು ಬಸ್ಸು ನಿಲ್ದಾಣಕ್ಕೆ ಹೊಂದಿಕೊAಡಿರುವ ವಿಶಾಲವಾದ ನಿವೇಶನದಲ್ಲಿ ಶ್ರೀ ವಿಷ್ಣುಮೂರ್ತಿ ಬಿಲ್ಡರ್ಸ್ & ಡೆವಲಪರ್ಸ್ ವತಿಯಿಂದ ನೂತನ ಬಹುಮಹಡಿ ಕಟ್ಟಡ “ಅಜೆಕಾರ್ ಕಾಂಪ್ಲೆಕ್ಸ್” ವಾಣಿಜ್ಯ ಸಂಕೀರ್ಣದ ಶಿಲಾನ್ಯಾಸ ಸಮಾರಂಭವು ನಾಳೆ ಜ.15ರಂದು ಸೋಮವಾರ ಜರುಗಲಿದೆ.
ಸಾಯಂಕಾಲ 5.30ಕ್ಕೆ ನೂತನ ಕಟ್ಟಡದ ಭೂಮಿಪೂಜೆ ನೆರವೇರಲಿದ್ದು, ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ.ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಬೆಂಗಳೂರು ಬಿಬಿಎಂಪಿ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಕೆ, ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶಿವರಾಮ ಜಿ ಶೆಟ್ಟಿ, ಅಜೆಕಾರು ಹೋಟೆಲ್ ಮೀನಾದ ಮಾಲಕ ಹಾಗೂ ಮುಂಬಯಿ ಉದ್ಯಮಿ ಸುಂದರ ಶೆಟ್ಟಿ, ಕಾರ್ಕಳ ಜ್ಞಾನಸುಧ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಡಾ.ಸಂತೋಷ್ ಕುಮಾರ್ ಶೆಟ್ಟಿ, ಎಣ್ಣೆಹೊಳೆ ವೇದಮೂರ್ತಿ ಅರುಣ್ ಭಟ್, ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ,ವೇದಮೂರ್ತಿ ಶ್ರೀರಾಮ್ ಭಟ್, ಹೆರ್ಮುಂಡೆ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಘವೇಂದ್ರ ಭಟ್, ಅಜೆಕಾರು ಸೆಕ್ರೇಡ್ ಹಾರ್ಟ್ ಚರ್ಚ್ ಧರ್ಮಗುರು ಪ್ರವೀಣ್ ಅಮೃತ್ ಮಾರ್ಟಿಸ್, ಅಜೆಕಾರು ಜುಮ್ಮಾ ಮಸೀದಿಯ ಖತೀಬ್ ಉಮರ್ ಫಾರೂಕ್ ಜವಾಹರಿ, ಅಜೆಕಾರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವಿ ಕಾರಗಿ, ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್, ಉಪಾಧ್ಯಕ್ಷೆ ಮೇರಿ ಮಸ್ಕರೇನಸ್, ಎಣ್ಣೆಹೊಳೆ ರೇಶ್ಮಾ ಸ್ಟೋರ್ ಮಾಲಕ ಉದ್ಯಮಿ ಪಿ ಹಾಜಿ ಭಾಗವಹಿಸಲಿದ್ದಾರೆ ಎಂದು ಪಾಲುದಾರರಾದ ಹೆರ್ಮುಂಡೆ ಕಲ್ಲಬೆಟ್ಟು ಸುಧಾಕರ್ ಶೆಟ್ಟಿ ಹಾಗೂ ಸಾಣೂರು ಕಾಂದಬೆಟ್ಟು ರವೀಂದ್ರ ಶೆಟ್ಟಿ ತಿಳಿಸಿದ್ದಾರೆ
ಶಿಲಾನ್ಯಾಸ ಕಾರ್ಯಕ್ರಮದಂದು ಕಟ್ಟಡದ ಮಳಿಗೆಯನ್ನು ಬುಕ್ ಮಾಡಿದವರಿಗೆ ವಿಶೇಷ ರಿಯಾಯಿತಿಯಿದೆ ಎಂದು ಪಾಲುದಾರರು ತಿಳಿಸಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಸಂಜೆ 6 ಗಂಟೆಯಿAದ ಅಮ್ಮ ಕಲಾವಿದರ ಕುಡ್ಲ ಇವರಿಂದ ‘ಅಮ್ಮೆರ್’ ಎನ್ನುವ ತುಳು ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ. ಬಳಿಕ ರಾತ್ರಿ 8:30 ರಿಂದ ಸಹಭೋಜನದ ವ್ಯವಸ್ಥೆ ಇದೆ ಎಂದು ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ