Share this news

ಕಾರ್ಕಳ : ಕಾರ್ಕಳ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಪಡಿಸುವ ಕಾರ್ಯಕ್ರಮವು ನಾಳೆ ಬೆಳಿಗ್ಗೆ 8:30 ಕ್ಕೆ ಸರಿಯಾಗಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಈಗಾಗಲೇ ದೇವಸ್ಥಾನದಿಂದ ಕಾಣಿಕೆಹುಂಡಿ ಪಡೆದುಕೊಂಡು ಹೋಗಿರುವ ಭಕ್ತರು ಅದು ಭರ್ತಿಯಾಗಿದ್ದಲ್ಲಿ ದೇವಸ್ಥಾನಕ್ಕೆ ಹಿಂತಿರುಗಿಸಿ ಸೂಕ್ತ ರಶೀದಿ ಪಡೆದುಕೊಳ್ಳಬಹುದು. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ.

Leave a Reply

Your email address will not be published. Required fields are marked *