Share this news

ಪುತ್ತೂರು : ನಾಳೆ (ಫೆ.11)ರಂದು ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ ವಾಹನ ಸವಾರರಿಗಾಗಿ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಈಗಾಗಲೇ ನಗರದೆಲ್ಲೆಡೆ ಪೊಲೀಸರಿಂದ ಕಣ್ಗಾವಲು ಹೆಚ್ಚಿಸಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಹೀಗಾಗಿ ವಾಹನ ಸಂಚಾರ ಮಾರ್ಗದಲ್ಲಿ ವ್ಯತ್ಯಯವಾಗಿದ್ದು, ಪರ್ಯಾಯ ಮಾರ್ಗವನ್ನು ಬಳಸಬೇಕಾಗಿದೆ.

ಪುತ್ತೂರು ನಗರಕ್ಕೆ ಆಗಮಿಸುವ ವಾಹನಗಳಿಗಾಗಿ ಪುತ್ತೂರು ಡಿವೈಎಸ್ಪಿಯವರ ಕೋರಿಕೆ ಮೇರೆಗೆ ಸಹಾಯಕ ಆಯುಕ್ತರು ಪರ್ಯಾಯ ಮಾರ್ಗವನ್ನು ಒದಗಿಸಿದ್ದಾರೆ. .ಪುತ್ತೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಲಿನೆಟ್ ಜಂಕ್ಷನ್‌ನಿAದ ಮುಕ್ರಂಪಾಡಿಯವರೆಗೂ ಸದ್ರಿ ರಸ್ತೆಯಲ್ಲಿ ಫೆ. 11 ಮಧ್ಯಾಹ್ನ 2.00 ಗಂಟೆಯಿAದ ಸಂಜೆ 5.30 ಗಂಟೆಯವರೆಗೂ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ, ಸುಗಮ ಸಂಚಾರದ ದೃಷ್ಟಿಯಿಂದ ಆ ಸಮಯದಲ್ಲಿ ಮಂಗಳೂರು ಕಡೆಯಿಂದ ಸುಳ್ಯ ಮತ್ತು ಮಡಿಕೇರಿ ಕಡೆ ಹೋಗುವ ವಾಹನಗಳು ಲಿನೆಟ್ ಜಂಕ್ಷನ್ ಬೊಳುವಾರು ಜಂಕ್ಷನ್ ದರ್ಬೆ ಪುರುಷರಕಟ್ಟೆ ಪಂಜಳ ಪರ್ಪುಂಜ ಮಾರ್ಗವನ್ನು ಬಳಸುವುದು.

ಮಡಿಕೇರಿ ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪರ್ಪುಂಜ ಪಂಜಳ ಪುರುಷರಕಟ್ಟೆ ದರ್ಬೆ ಬೊಳುವಾರು ಜಂಕ್ಷನ್ ಲಿನೆಟ್ ಜಂಕ್ಷನ್ ಮಾರ್ಗವನ್ನು ಬಳಸುವುದು . ಮುಂದಿನ ಚುನಾವಣೆಗಾಗಿ ಬಿಜೆಪಿ ಪುತ್ತೂರು ಜಿಲ್ಲೆಯಾದ್ಯಂತ ಅಮಿತ್ ಶಾ ರಣತಂತ್ರ ರೂಪಿಸಲು ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *