ಕಾರ್ಕಳ: ಕಾರ್ಕಳ ಜೋಡುರಸ್ತೆಯಲ್ಲಿ 06.50 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಯು ನಾಳೆ ಸಂಜೆ 6 ಗಂಟೆಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಯಲಿದೆ.

ಒಟ್ಟು ರೂ.650 ಲಕ್ಷ ಅನುದಾನದಲ್ಲಿ 550.00 ಮೀಟರ್ ಉದ್ದಕ್ಕೆ ರಸ್ತೆಯ ಎರಡೂ ಬದಿಗಳಲ್ಲಿ ಆರ್.ಸಿ.ಸಿ. ಚರಂಡಿ ನಿರ್ಮಾಣ, ಕಾಲುದಾರಿ ನಿರ್ಮಾಣ ಮತ್ತು ಇಂಟರ್‌ಲಾಕ್ ಅಳವಡಿಕೆ. ರಸ್ತೆಯನ್ನು ಎರಡೂ ಕಡೆ ಅಗಲೀಕರಣಗೊಳಿಸಿ ಡಾಂಬರೀಕರಣ, ಕಾಲುದಾರಿ ಮತ್ತು ಡಾಮರು ರಸ್ತೆಯ ಮಧ್ಯೆ ವಾಹನ ಪಾರ್ಕಿಂಗ್ ಮಾಡಲು ಇಂಟರ್‌ಲಾಕ್ ವ್ಯವಸ್ಥೆ ಹಾಗೂ ಪಾದಚಾರಿಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಕಾಲುದಾರಿಯ ಮೇಲ್ಬಾಗದಲ್ಲಿ ಹಾಗೂ ರಸ್ತೆಯ ಡಿವೈಡರ್‌ನಲ್ಲಿ ಅಲಂಕಾರಿಕಾ ದಾರಿದೀಪಗಳನ್ನು ಅಳವಡಿಸಲಾಗಿದೆ.

