ಕಾರ್ಕಳ: ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಿಯಪ್ಪನ ಕೆರೆಯ ಪಾಜೆಗುಡ್ಡೆ ಅರಣ್ಯದ ನಾಲ್ಕು ಎಕರೆ ಪ್ರದೇಶದ ಬಳಿ ನಿರ್ಮಾಣವಾದ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದ ಲೋಕಾರ್ಪಣೆಯು ನಾಳೆ (ಮಾರ್ಚ್.8) ರಂದು ಜರುಗಲಿದೆ.
ಸಚಿವರಾದ ವಿ. ಸುನಿಲ್ ಕುಮಾರ್ ಉದ್ಯಾನವನವನ್ನು ಲೋಕಾರ್ಪಣೆಗೊಳಿಸಲಿದ್ದು, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಇಲಾಖಾ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಈ ಉದ್ಯಾನವನದಲ್ಲಿ ಮಕ್ಕಳ ಆಟಿಕೆಗಳು, ದೋಣಿ ವಿಹಾರ, ವಾಕಿಂಗ್ ಟ್ರ‍್ಯಾಕ್, ಅರಣ್ಯ ಚಾರಣಪಥ, ರಾಶಿವನ, ನಕ್ಷತ್ರವನ, ಔಷಧಿ ವನ, ಜಲಪಾತ, ರಾಕ್ ಗಾರ್ಡನ್, ಫಿಶ್ ಪೆಡಿಕ್ಯೂರ್, ಬಟರ್ ಫ್ಲೈ ಪಾರ್ಕ್, ಸೆಲ್ಫಿ ಪಾಯಿಂಟ್, ಶೂಟಿಂಗ್ ತಾಣಗಳನ್ನು ಸಚಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಮೂಡುಬಿದಿರೆ ವಲಯ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.