Share this news

ಕಾರ್ಕಳ: ಮಗನೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ತಾಯಿಯೊಬ್ಬರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗರಡಿಯ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.ನಿಟ್ಟೆ ಗ್ರಾಮದ ಕೆಳಗಿನ ಮನೆ ನಿವಾಸಿ ನಿಟ್ಟೆ ಕಾಲೇಜು ಉದ್ಯೋಗಿ ಭಾಸ್ಕರ್ ಶೆಟ್ಟಿ ಎಂಬವರ ಪತ್ನಿ ಮಲ್ಲಿಕಾ ಶೆಟ್ಟಿ (43) ಎಂಬವರು ಮೃತಪಟ್ಟ ಮಹಿಳೆ.

ಮಲ್ಲಿಕಾ ಶೆಟ್ಟಿ ಶುಕ್ರವಾರ ತನ್ನ ತವರು ಮನೆಯಾದ ಮಂಗಳೂರಿನ ಸುರತ್ಕಲ್ ಗೆ ಬಸ್ಸಿನಲ್ಲಿ ಹೋಗಲು ತನ್ನ ಪುತ್ರ ಭವಿಷ್ ನ ಜೊತೆ ಬೈಕಿನಲ್ಲಿ ನಿಟ್ಟೆ ಬಸ್ಸು ನಿಲ್ದಾಣಕ್ಕೆ ಹೋಗುತ್ತಿದ್ದಾಗ ಈ‌ ದುರ್ಘಟನೆ‌ ನಡೆದಿದೆ. ಏಕಾಏಕಿ ಮಳೆ ಬಂದ ಹಿನ್ನೆಲೆಯಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಮಲ್ಲಿಕಾ ಶೆಟ್ಟಿ ಕೊಡೆ ಬಿಡಿಸಲು ಮುಂದಾದಾಗ ಗಾಳಿಯ ರಭಸಕ್ಕೆ ಕೊಡೆಯೊಂದಿಗೆ ಆಯತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *