Share this news

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿAಗ್ ವಿಭಾಗದಿಂದ ಇಂಧನ ಸಾಧನಗಳು ಮತ್ತು ಇ-ತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಪುಣೆಯ ಎನ್ಸಿಎಲ್ ವಿಜ್ಞಾನಿ ಡಾ.ನಾಯಕ ಜಿ.ಪಿ ಉದ್ಘಾಟಿಸಿದರು. ಉಪಪ್ರಾಂಶುಪಾಲ ಡಾ.ಐ.ಆರ್.ಮಿತ್ತಂತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಾಗಾರವನ್ನು ಮೂರು ಸೆಷನ್ ಗಳಲ್ಲಿ ನಡೆಸಲಾಯಿತು. ಮೊದಲ ಸೆಷನ್ ನ್ನು ಬಯೋಲಾಜಿಕ್ ನ ಅಪ್ಲಿಕೇಶನ್ ಸ್ಪೆಷಲಿಸ್ಟ್ ಡಾ.ಆಶಿಶ್ ಅರವಿಂದ್ ನಿರ್ವಹಿಸಿದರು. ಅವರು ಬ್ಯಾಟರಿ ಬೇಸಿಕ್ಸ್ ಮತ್ತು ಪರಿಕಲ್ಪನೆಗಳ ಬಗ್ಗೆ ಮಾತನಾಡಿದರು. ಎರಡನೇ ಸೆಷನ್ ನ್ನು ಎಂಎಎAಐಟಿಯ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ಕೆ ತಿವಾರಿ ನಿರ್ವಹಿಸಿದರು. ಅವರು ಹೊಸ ತಂತ್ರಜ್ಞಾನಗಳು ಮತ್ತು ಉತ್ಪಾದನೆಗಾಗಿ ಇಂಗಾಲದ ನ್ಯಾನೊ ವಸ್ತುಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು. ಮೂರನೇ ಮತ್ತು ಕೊನೆಯ ಸೆಷನ್ ನ್ನು ಪುಣೆಯ ಎನ್ಸಿಎಲ್ ವಿಜ್ಞಾನಿ ಡಾ.ನಾಯಕ ಜಿ.ಪಿ ನಿರ್ವಹಿಸಿದರು. ಅವರು ಲಿ-ಐಯಾನ್ ಬ್ಯಾಟರಿಗಳು: ಅಪ್ಲಿಕೇಶನ್, ಮರುಬಳಕೆ ಮತ್ತು ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು.

ಮೆಕ್ಯಾನಿಕಲ್ ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ ಪಿ ಸ್ವಾಗತಿಸಿದರು. ಸಂಯೋಜಕ ಡಾ.ಸಂತೋಷ್ ಜಿ ಕಾರ್ಯಾಗಾರದ ಬಗ್ಗೆ ವಿವರಿಸಿದರು.
ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕರು ಸೇರಿದಂತೆ 50 ಮಂದಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಿಕೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

 

 

 

 

 

 

 

 

Leave a Reply

Your email address will not be published. Required fields are marked *