Share this news

ಕಾರ್ಕಳ : ತಾಲೂಕಿನ ನಿಟ್ಟೆ ಗ್ರಾಮದ ದೂಪದಕಟ್ಟ ಎಂಬಲ್ಲಿ ಪಾದಾಚಾರಿಯೊಬ್ಬರಿಗೆ ಟಾಟಾ ಏಸ್ ವಾಹನ ಢಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆವರು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟಿದ್ದಾರೆ.

ನಿಟ್ಟೆ ದೂಪದಕಟ್ಟೆ ಎಂಬಲ್ಲಿ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಎ.29 ರಂದು ಭೋಜ ಎಂಬವರು ರಸ್ತೆ ದಾಟುತ್ತಿದ್ದ ವೇಳೆ ನಿಟ್ಟೆ ಕಡೆಯಿಂದ ಕಾರ್ಕಳಕ್ಕೆ ಬರುತ್ತಿದ್ದ ಟಾಟಾ ಏಸ್ ಢಿಕ್ಕಿಯಾಗಿ ಭೋಜ ಅವರ ತಲೆಗೆ ಗಾಯವಾಗಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *