ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಪಾನ್ ಮೂಲದ ಝೆನ್ಕೆನ್ ಸಂಸ್ಥೆಯ ಭಾರತದ ವಿಭಾಗದ ಸಹಯೋಗದೊಂದಿದೆ ನಿಟ್ಟೆ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ಡಿ.8 ರಂದು ಝೆನ್ಕೆನ್ ದಿನವನ್ನು ಆಚರಿಸಲಿದೆ. ಇದೊಂದು ಜಪಾನ್ ದೇಶದ ಸಾಂಸ್ಕೃತಿಕ ಹಾಗೂ ಔದ್ಯೋಗಿಕ ವಿಚಾರ ವಿನಿಮಯದ ವೇದಿಕೆಯಾಗಲಿದೆ. ಈ ಒಂದು ದಿನದ ಕಾರ್ಯಕ್ರಮಕ್ಕೆ ಝೆನ್ಕೆನ್ ಕಾರ್ಪರೇಶನ್ ಸಂಸ್ಥೆಯ ಆಪರೇಶನ್ಸ್ ಮ್ಯಾನೇಜರ್ ಅಭಿಶೇಕ್ ಎಸ್.ಎನ್ ಹಾಗೂ ಜಪಾನೀಸ್ ಲ್ಯಾಂಗ್ವೇಜ್ ಟ್ರೈನರ್ ತಕಕೊ ಇಮಮುರ ಭಾಗವಹಿಸಲಿರುವರು. ಈ ಒಂದು ದಿನದ ಸಂಭ್ರಮಾಚರಣೆಯಲ್ಲಿ ಉದ್ಘಾಟನೆ, ಉದ್ಯೋಗ ಸಂಬAಧಿ ಸೆಮಿನಾರ್, ಆಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ