ಕಾರ್ಕಳ :ನಮ್ಮ ತಾಲೂಕಿನ ಜನ ಸೌಲಭ್ಯಗಳಿಲ್ಲವೆಂದು ಉದ್ಯೋಗ ಅರಸಿಕೊಂಡು ಬೇರೆಡೆಗೆ ಹೋಗದಂತೆ ಎಲ್ಲಾ ಸೌಲಭ್ಯಗಳು ಇಲ್ಲಿಯೇ ಸಿಗಬೇಕೆನ್ನುವುದೇ ಸ್ವರ್ಣ ಕಾರ್ಕಳದ ಪರಿಕಲ್ಪನೆಯಾಗಿದೆ, ಇದರ ಭಾಗವಾಗಿ ನಿಟ್ಟೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಭೂಮಿಪೂಜೆ ನೆರವೇರಿದೆ. ಈ ಯೋಜನೆಯು ಸಾಕಾರಗೊಂಡ ಬಳಿಕ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಯಾಗುವುದರ ಜತೆಗೆ ಕಾರ್ಕಳವನ್ನು ಸವಾಂಗೀಣ ಅಭಿವೃದ್ದಿಯತ್ತ ಕೊಂಡೊಯ್ಯುವುದೇ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಎಂದು ಇಂಧನ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಶುಕ್ರವಾರ ನಿಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದನಾಡಿನಲ್ಲಿ ಸುಮಾರು 20 ಕೋ.ರೂ ವೆಚ್ಚದ ಜವಳಿ ಪಾರ್ಕ್ ಯೋಜನೆಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಉದ್ಯೋಗ, ಪರಿಸರಸ್ನೇಹಿ ಕೈಗಾರಿಕೆಗಳು ಬರಬೇಕೆನ್ನುವುದು ಜನರ ಅಪೇಕ್ಷಿಯಾಗಿದೆ, ಈ ನಿಟ್ಟಿನಲ್ಲಿ ಗೇರುಬೀಜ ಸಂಸ್ಕರಣಾ ಘಟಕ, ಜವಳಿ ಪಾರ್ಕ್ ಪರಿಸರಸ್ನೇಹಿ ಕೈಗಾರಿಕೆಗಳಾಗಿದ್ದು,ಉದ್ಯೋಗಸೃಷ್ಟಿಯ ಜತೆಗೆ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ ಎಂದರು.
ಜವಳಿ ಪಾರ್ಕ್ ಕ್ಯಾಂಪಸ್ ಒಳಗೆ ನೂಲನ್ನು ನೇಯುವುದನ್ನು ಹಿಡಿದು ಜೀನ್ಸ್ ಪ್ಯಾಂಟ್ ತಯಾರಿಕೆ ತನಕವೂ ಎಲ್ಲವೂ ಇಲ್ಲೇ ಉತ್ಪಾದನೆಯಾಗಬೇಕು. ಜನರು ಇನ್ಯಾವುದೋ ಬೇರೆಕಡೆ ಹೋಗಿ ಕೊಂಡುಕೊಳ್ಳುವAತಿರಬಾರದು. ಎಲ್ಲವೂ ಕೂಡ ಉತ್ಪಾದನೆಯಾಗಿ ಎಲ್ಲರೂ ಇಲ್ಲೇ ಬರುವಂತೆ ಮಾಡಬೇಕು. ಇದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್,ನೀರು ಮುಂತಾದ ವ್ಯವಸ್ಥೆಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ ಎಂದರು. ಸುಮಾರು 20 ಕೋ.ರೂ ವೆಚ್ಚದ ಯೋಜನೆಯ ಪ್ರಸ್ತಾವನೆ ಅನುಮೋದನೆಗೊಂಡು ಈಗಾಗಲೇ ಸಚಿವ ಸಂಪುಟದಲ್ಲಿ ಮಂಜೂರಾತಿಯಾಗಿದೆ, ಆದಷ್ಟು ಶೀಘ್ರದಲ್ಲೇ ಅನುದಾನವನ್ನು ಬಿಡುಗಡೆಗೊಳಿಸಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು. ಮುಂದಿನ ಒಂದು ವರ್ಷದಲ್ಲಿ ಎಲ್ಲಾ ಕಾಮಗಾರಿಗಳನ್ನು ಮುಗಿಸಬೇಕೆನ್ನುವ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ ಎಂದರು. ಇದಲ್ಲದೇ ಕಾರ್ಕಳವನ್ನು ಶಿಲ್ಪಕಲಾ ಕ್ಲಸ್ಟರ್ ಮಾಡುವ ನಿಟ್ಟಿನಲ್ಲಿ ಕಲ್ಲಿನ ವಿಗ್ರಹ ಹಾಗೂ ಮರದ ಪಿಠೋಪಕರಣ ತಯಾರಿಕೆಗೆ ಫರ್ನಿಚರ್ ಹಬ್ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್ ಎಂ, ತಹಶಿಲ್ದಾರ್ ಅನಂತಶAಕರ ಬಿ, ನಿಟ್ಟೆ ಗ್ರಾ.ಪಂ ಅಧ್ಯಕ್ಷ ಸತೀಶ್ ಪೂಜಾರಿ, ಉದ್ಯಮಿಗಳಾದ ಅಶೋಕ ಅಡ್ಯಂತಾಯ, ಬೋಳಾಸ್ ಆಗ್ರೋ ಸಂಸ್ಥೆಯ ಮಾಲಿಕ ದಾಮೋದರ ಕಾಮತ್, ಜಯಶೀಲ ಶೆಟ್ಟಿ,ಸಂತೋಷ್ ಡಿಸಿಲ್ವ, ನಿಟ್ಟೆ ಗ್ರಾ.ಪಂ ಉಪಾಧ್ಯಕ್ಷೆ ಸುಮಿತ್ರಾ ಆಚಾರ್ಯ, ಪ್ರಶಾಂತ್ ಕುಮಾರ್ ಜೈನ್, ಮತ್ತಿತರರು ಉಪಸ್ಥಿತರಿದ್ದರು. ಜವಳಿ ಮತ್ತು ಕೈಮಗ್ಗ ಇಲಾಖೆಯ ಶಿವಶಂಕರ್ ಪ್ರಾಸ್ತವಿಕ ಮಾತುಗಳನ್ನಾಡಿ. ಕಾರ್ಕಳ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್ ಸ್ವಾಗತಿಸಿ, ಸುರೇಶ್ ಭಟ್ ಕಾರ್ಯಕ್ರಮ ನಿರೂಪಿಸಿ, ಬಾಲಕೃಷ್ಣ ಹೆಗ್ಡೆ ವಂದಿಸಿದರು.