Share this news

ಕಾರ್ಕಳ: ತಾಲೂಕಿನ ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿAಗ್ ವಿಭಾಗವು ನ್ಯಾನೊಮೆಟೀರಿಯಲ್ಸ್ ಮತ್ತು ಇಂಧನ ಸಾಧನಗಳ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಳ್ಕರ್, ಎನ್ಸಿಎಲ್ ಪುಣೆಯ ವಿಜ್ಞಾನಿ ಡಾ.ನಾಯಕ ಜಿ.ಪಿ., ಉಪಪ್ರಾಂಶುಪಾಲ ಡಾ. ಐ.ಆರ್.ಮಿತ್ತಂತಾಯ, ಪರೀಕ್ಷಾ ನಿಯಂತ್ರಕ ಡಾ.ಶ್ರೀನಿವಾಸ ರಾವ್ ಬಿ.ಆರ್., ಮೆಕ್ಯಾನಿಕಲ್ ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ ಪಿ., ಲ್ಯಾಬ್ ಉಸ್ತುವಾರಿ ಡಾ.ಸಂತೋಷ್ ಜಿ ಅವರ ಸಮ್ಮುಖದಲ್ಲಿ ಉದ್ಘಾಟಿಸಿಸಲಾಯಿತು.

ಪ್ರಯೋಗಾಲಯವು ಬಯೋಲಾಜಿಕ್ ಎಸ್ ಪಿ 50 ಇ ಎಲೆಕ್ಟ್ರೋಕೆಮಿಕಲ್ ವರ್ಕ್ ಸ್ಟೇಷನ್ ಅನ್ನು ಹೊಂದಿದೆ. ಇದನ್ನು ಬ್ಯಾಟರಿಗಳು, ಸೂಪರ್ ಕೆಪಾಸಿಟರ್ ಗಳು, ಇಂಧನ ಕೋಶಗಳು ಮತ್ತು ಸೌರ ಕೋಶಗಳಂತಹ ವಿವಿಧ ಶಕ್ತಿ ಶೇಖರಣಾ ಸಾಧನಗಳ ಅಪ್ಲಿಕೇಶನ್ ಗಳ ನಡವಳಿಕೆಯನ್ನು ಅಧ್ಯಯನ ಮಾಡಲು ಬಳಸಬಹುದು. ವಿವಿಧ ಕ್ಷೇತ್ರಗಳಲ್ಲಿ ಬಳಸುವ ವಿವಿಧ ಸಂವೇದಕ ಅನ್ವಯಿಕೆಗಳನ್ನು ಅಧ್ಯಯನ ಮಾಡಲೂ ಉಪಕರಣವನ್ನು ಬಳಸಬಹುದು.

 

 

 

 

 

 

 

 

Leave a Reply

Your email address will not be published. Required fields are marked *