ಕಾರ್ಕಳ: ತಾಂತ್ರಿಕ ದೋಷದಿಂದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ಹೊಸ್ಮಾರು ಸಮೀಪದ ನೆಲ್ಲಿಕಾರು ಎಂಬಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಪಿಕಪ್ ಚಾಲಕ ಹೊಸ್ಮಾರು ಕಡೆಯಿಂದ ಅಳಿಯೂರು ಕಡೆಗೆ ಹೋಗುತ್ತಿದ್ದ ಪಿಕಪ್‌ನ ಸ್ಟೇರಿಂಗ್ ನಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ವಾಹನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.