Share this news

ಕಾರ್ಕಳ : ಶ್ರೀ ಭುವನೇಂದ್ರ ಕಾಲೇಜು, ಇತ್ತೀಚೆಗೆ ನ್ಯಾಕ್ ಮೌಲ್ಯಮಾಪನದಲ್ಲಿ ತನ್ನ ಹಿರಿಮೆಗೆ ತಕ್ಕ ಅಂಕಗಳನ್ನು ಪಡೆಯದಿದ್ದ ಸಂದರ್ಭದಲ್ಲ್ಲಿ ನವದೆಹಲಿಯ ನ್ಯಾಕ್ ಸಂಸ್ಥೆಗೆ ಮರುಮೌಲ್ಯಮಾಪನಕ್ಕಾಗಿ ಮರು ಮನವಿ ಸಲ್ಲಿಸಿತ್ತು. ಆ ಪ್ರಕಾರ ಕಳೆದ ತಿಂಗಳು ಪ್ರೊ. ಅಮರ್ ರೇ, ಪ್ರಾಧ್ಯಾಪಕರು, ನಾರ್ತ್ ಈಸ್ಟರ್ನ್ ವಿಶ್ವವಿದ್ಯಾಲಯ, ವಾರಣಾಸಿ ಇವರನ್ನೊಳಗೊಂಡ ಮೂರು ಜನ ತಜ್ಞರ ತಂಡ ಬೆಂಗಳೂರಿನ ನ್ಯಾಕ್ ಸಂಸ್ಥೆಯ ನಿರ್ದೇಶನದಂತೆ ಪುನ: ಪರಿವೀಕ್ಷಿಸಿ ನೀಡಿದ ವರದಿಯಂತೆ ಕಾಲೇಜು ‘ಎ’ ಗ್ರೇಡ್ ಪಡೆದುಕೊಂಡಿದೆ.

ಇದರಿಂದ ಕಾಲೇಜಿಗೆ ಹೆಮ್ಮೆ ಮತ್ತು ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ. ಕೋಟ್ಯಾನ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಕ್ ಸಮಿತಿ ಮತ್ತು ಸಹಕಾರ ನೀಡಿದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

Leave a Reply

Your email address will not be published. Required fields are marked *