ಮುಲ್ಕಿ: ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆ ಹಾಲು ಉತ್ಪಾದಕರ ಸಹಕಾರ ಸಂಘದ 2022-2023 ನೇ ಸಾಲಿನ ಸರ್ವ ಸದಸ್ಯರ ಸಭೆಯು ಅಧ್ಯಕ್ಷ ನವೀನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಚಂದ್ರಶೇಖರ್ ಭಟ್ ಮಾತನಾಡಿ, ಹಾಲಿನ ಗುಣಮಟ್ಟವನ್ನು ಕಾಪಾಡಲು ಹಸುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ಸಂದೀಪ್ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಗನ್ನಾಥ್ ದೇವಾಡಿಗ, ನಿರ್ದೇಶಕರುಗಳಾದ ವಸಂತ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಸತೀಶ್ ಶೆಟ್ಟಿ, ಸತೀಶ್ ಜೆ ಶೆಟ್ಟಿ, ರಾಜೇಶ್ ಶೆಟ್ಟಿ, ಮೀರಾ, ಶಾರದ ದೇವಾಡಿಗ , ಶೀಲಾ ಜೆ ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಮಾಜ ಅಧ್ಯಕ್ಷರುಗಳಾದ ವಿಶ್ವನಾಥ ಶೆಟ್ಟಿ ಪಂಜದ ಗುತ್ತು , ಸದಾನಂದ ಶೆಟ್ಟಿ ಪಂಜ, ಸತೀಶ್ ಜೆ .ಶೆಟ್ಟಿ ಪಂಜದ ಗುತ್ತು, ಸತೀಶ್ ಎಂ ಶೆಟ್ಟಿ ಬೈಲ ಗುತ್ತು, ನವೀನ್ ಶೆಟ್ಟಿ ನಲ್ಯ ಗುತ್ತು, ಕೆಮ್ರಾಲ್ ಗ್ರಾ.ಪಂ ಸದಸ್ಯ ಸುರೇಶ್ ಪಂಜ ರವರನ್ನು ಮತ್ತು ಕಾರ್ಯದರ್ಶಿಯವರನ್ನು ಸೇವೆಯನ್ನು ಮಾಡಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಸಂಘದ ರೈತರಿಗೆ 22.ಶೇ ಡಿವಿಡೆಂಟ್ ಫಂಡ್ ಅನ್ನು ವಿತರಿಸಲಾಯಿತು. 25ನೇ ವರ್ಷದ ಸವಿನೆನಪಿಗಾಗಿ ಸದಸ್ಯರಿಗೆ ಸ್ಟೀಲ್ ಪಾತ್ರೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ 85% ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು .
ಸಂಘಕ್ಕೆ 25ನೇ ವರ್ಷದ ಕೊಡುಗೆಯಾಗಿ ರತ್ನ ವಸಂತ ಶೆಟ್ಟಿ ನಲ್ಯ ಗುತ್ತು ರವರು ಧ್ವಜ ಸ್ತಂಭದ ಕಟ್ಟೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ ಎಂದು ಅಧ್ಯಕ್ಷ ನವೀನ್ ಶೆಟ್ಟಿ ಸಭೆಯಲ್ಲಿ ತಿಳಿಸಿದರು.
ಕಾರ್ಯದರ್ಶಿ ಜಗದೀಶ್ ಶೆಟ್ಟಿ ವಂದಿಸಿ, ಸತೀಶ್ ಎಂ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು