Share this news

ಬೆಳ್ತಂಗಡಿ: ದುಷ್ಕರ್ಮಿಗಳಿಂದ ಅತ್ಯಾಚಾರ ಕೊಳಗಾಗಿ ಹತ್ತಿಗೀಡಾದ ಸೌಜನ್ಯ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಹೋರಾಟಗಳು ನಡೆಯುತ್ತಿದ್ದರೂ ಕೆಲವು ಪ್ರಮುಖ ದಿನಪತ್ರಿಕೆಗಳು ಈ ಕುರಿತು ವರದಿಗಳನ್ನು ಪ್ರಕಟಿಸುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಪ್ರಮುಖ ದಿನಪತ್ರಿಕೆಗಳ ವಿರುದ್ಧ ಕಿಡಿಕಾರಿದ್ದಾರೆ.

ಪತ್ರಿಕೆಗಳು ನ್ಯಾಯದ ಪರವಾಗಿರಬೇಕು ಅನ್ಯಾಯವನ್ನು ಪ್ರತಿಭಟಿಸಬೇಕು ಹಾಗೂ ಸತ್ಯದ ಪರವಾಗಿರಬೇಕು ನೀವು ಸತ್ಯವನ್ನು ಬರೆಯಿರಿ,ಸಮಾಜದ ಕಣ್ಣು ತೆರೆಸಬೇಕು,ನಿಮ್ಮ ಮೇಲೆ ಜನ ಭರವಸೆ ಇಟ್ಟಿದ್ದಾರೆ, ಸತ್ಯಮೇವ ಜಯತೆ ಎಂಬ ಧ್ಯೇಯ ವಾಕ್ಯವನ್ನು ಪಾಲಿಸಿಕೊಂಡು ವಸ್ತು ನಿಷ್ಠ ವರದಿ ಮಾಡಬೇಕೇ ಹೊರತು ಸತ್ತ ಮೇಲೆ ವರದಿ ಮಾಡುವುದಲ್ಲ ಎಂದು ಆಕ್ರೋಶ ಹೊರಹಾಕಿದರು.

ಪ್ರಮುಖ ಮಾಧ್ಯಮಗಳಲ್ಲಿ ಸೌಜನ್ಯ ಪರವಾಗಿ ನಡೆಯುವ ಹೋರಾಟಗಳ ಕುರಿತ ವರದಿಗಳು ಪ್ರಕಟಗೊಳ್ಳದ ಹಿನ್ನೆಲೆಯಲ್ಲಿ ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ, ಪತ್ರಿಕೆಗಳು ಹಾಗೂ ಟಿವಿಯವರು ಎಲ್ಲೋ ನಡೆದಿರುವ ಸಣ್ಣಪುಟ್ಟ ಸುದ್ದಿಗಳನ್ನು ವೈಭವಿಕರಿಸಿ ಬರೆಯುತ್ತಾರೆ ಆದರೆ ಕಳೆದ 11 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸೌಜನ್ಯಳ ಕುಟುಂಬದ ಪರವಾಗಿ ಧ್ವನಿ ಎತ್ತದ ಮಾಧ್ಯಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ. ಮಾಧ್ಯಮ ಸಂಸ್ಥೆಗಳ ಪ್ರಮುಖರಿಗೆ ನೈತಿಕತೆ ಇದ್ದರೆ ನ್ಯಾಯದ ಪರವಾಗಿ ನಿಂತು ವರದಿ ಮಾಡಿ, ಕೇವಲ ಜಾಹೀರಾತಿನ ಆಸೆಗಾಗಿ ಬಕೆಟ್ ಮಾಧ್ಯಮಗಳಾಗದೇ‌ ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು

Leave a Reply

Your email address will not be published. Required fields are marked *