ಕಾರ್ಕಳ: ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿ ಅಸ್ಸಾಂ ಮೂಲದ ಕಲ್ಲುಕೋರೆ ಕಾರ್ಮಿಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಪಳ್ಳಿಯ ಸಿದ್ದಿಸುಬ್ರಹ್ಮಭಲಸ ಮಾಡಿಕೊಂಡಿದ್ದ ಅಸ್ಸಾಂ ರಾಜ್ಯದ ಗೋಲಾಘಾಟ್ ಜಿಲ್ಲೆಯ ನಿವಾಸಿ ಗಣೇಶ್ ಪುರಿ(35) ಎಂಬಾತ ಮೃತಪಟ್ಟ ಕಾರ್ಮಿಕ. ಈತ ಬುಧವಾರ ಸಂಜೆ ಕೆಲಸಮುಗಿಸಿ ತನ್ನ ಸಂಬAಧಿಕನ ಜತೆ ಸ್ನಾನಕ್ಕೆಂದು ಬಾವಿಯ ಬಳಿ ಹೋಗಿದ್ದಾಗ ಕುಡಿತದ ಮತ್ತಿನಲ್ಲಿ ಬಾವಿಯ ಆವರಣಗೋಡೆಯಲ್ಲಿ ಕುಳಿತವನು ಆಯತಪ್ಪಿ ಬಾವಿಗೆ ಬಿದ್ದು ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಗಣೇಶ್ ಪುರಿ ತನ್ನ ಪರಿಚಯದ ಅಪ್ಪು ಎಂಬಾತನ ಜತೆಗೆ ಸ್ನಾನಕ್ಕೆ ತೆರಳಿದ್ದ. ಇತ್ತ ಅಪ್ಪು ಸ್ನಾನ ಮಾಡುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ಗಣೇಶ್ ಪುರಿ ಬಾವಿಯ ಕಟ್ಟೆಯ ಮೇಲೆ ಕುಳಿತವನು ಏಕಾಎಕಿ 35 ಅಡಿ ಆಳದ ಬಾವಿಗೆ ಬಿದ್ದಾಗ ಆತನ ಜತೆಗಿದ್ದ ಅಪ್ಪು ಎಂಬಾತ ಮೃತ ಗಣೇಶ ಪುರಿಯ ಸಂಬAಧಿ ಚಂದ್ರಪ್ರಸಾದ ಎಂಬಬವರಿಗೆ ಕರೆದಾಗ ಅವರಿಬ್ಬರು ಸೇರಿ ಗಣೇಶ್ ಪುರಿಯನ್ನು ಮೇಲಕ್ಕೆತ್ತಲು ಯತ್ನಿಸಿದರೂ ಆದಾಗಲೇ ಗಣೇಶ್ ಪುರಿ ಮೃತಪಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯಗಳಿಂದ ಕ್ರಶರ್ ಹಾಗೂ ಕಲ್ಲುಕೋರೆ ಕಾರ್ಮಿಕರು ನಾನಾ ಕಾರಣಗಳಿಂದ ಮೃತಪಟ್ಟ ಘಟನೆಗಳು ನಡೆಯುತ್ತಿದ್ದು, ಕ್ರಶರ್ ಹಾಗೂ ಕಲ್ಲುಕೋರೆಗಳು ಕಾರ್ಮಿಕರಿಗೆ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ