Share this news
ಕಲಬುರಗಿ: ರಾಜ್ಯದಲ್ಲಿ ಮಳೆ ಅಭಾವ ಕಾರಣ ಬರಗಾಲ ಘೋಷಣೆ ಮಾಡಿದ್ದರಿಂದ ಬರಗಾಲ ಪರಿಹಾರದ ಆರಂಭಿಕ ಕಂತು ತಲಾ‌ 2,000 ರೂ. ಈಗಾಗಲೆ ಕಲಬುರಗಿ ಜಿಲ್ಲೆಯ 2.25 ಲಕ್ಷ ರೈತರಿಗೆ 44.74 ಕೋಟಿ ರೂ. ಜಮೆ‌ ಮಾಡಿದ್ದು, ಬಾಕಿ ಉಳಿದ 1.60 ಲಕ್ಷ ರೈತರಿಗೆ 2-3 ದಿನದಲ್ಲಿ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬರಗಾಲ ಘೋಷಣೆ ಮಾಡಿ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಪರಿಹಾತ ಹಣ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದೂವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಸಂಕಷ್ದದಲ್ಲಿದ ರೈತರಿಗೆ ನೆರವಿಗೆ ಧಾವಿಸಲು ಎನ್.ಡಿ.ಅರ್.ಆಫ್ ಅನುದಾನ ನಿರೀಕ್ಷಿಸಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದಾದ್ಯಂತ ಒಟ್ಟಾರೆ 35 ಲಕ್ಷ ರೈತರಿಗೆ 650 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಇದೂವರೆಗೆ 24 ಲಕ್ಷ ಜನರಿಗೆ 519 ಕೋಟಿ ರೂ. ಪಾವತಿಯಾಗಿದೆ. 2-3 ದಿನದಲ್ಲಿ ರಾಜ್ಯದ ಉಳಿದ 11-12 ಲಕ್ಷ ಜನರಿಗೆ ಹಣ ಜಮೆ ಮಾಡಲಾಗುತ್ತದೆ ಎಂದರು.

ಡಿ.ಬಿ.ಟಿ. ಹಣ ಪಾವತಿ ಸಂದರ್ಭದಲ್ಲಿ ಎದುರಿಸಲಾಗುತ್ತಿದ್ದು, ಅಧಾರ್, ಬ್ಯಾಂಕ್ ಲಿಂಕ್ ಅಪಡೇಟ್ ಕಾರ್ಯ ಶೇ.60 ರಿಂದ 80ಕ್ಕೆ ಹೆಚ್ಚಿಸಿದರಿಂದ ಶೇ.80ರಷ್ಟು ಜನರಿಗೆ ಪರಿಹಾರ ಸಿಕ್ಕಿದೆ. ನಮ್ಮ‌ ಗುರಿಯಂತೆ ಇನ್ನು ಕನಿಷ್ಠ ಶೇ.5ರಷ್ಟು ಅಪಡೇಟ್ ಕಾರ್ಯ ಮಾಡಬೇಕಿದೆ. ಮುಂದಿನ ಕಂತು ಪಾವತಿಯೊಳಗೆ ಈ ಸಮಸ್ಯೆ ಬಗೆಹರಿಸಬೇಕು. ಇದನ್ನು ಮಿಷನ್ ಮೋಡ್ ನಲ್ಲಿ ಮಾಡಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರಿಗೆ ಸಚಿವರು ನಿರ್ದೇಶನ ನೀಡಿದರು.

ಕಳೆದ ಜುಲೈ ಮಾಹೆಯಲ್ಲಿ ಜಿಲ್ಲೆಯಲ್ಲಿ ಕಂದಾಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಮಾಡಿದಾಗ, ಕಲಬುರಗಿ ಜಿಲ್ಲೆಯಲ್ಲಿ ತಹಶೀಲ್ದಾರ ಬಳಿ ಬಾಕಿ ಇದ್ದ 790 ಕಂದಾಯ ಕೋರ್ಟ್ ಪ್ರಕರಣ ಇದೀಗ 294ಕ್ಕೆ ಇಳಿದಿದೆ. ಇದಲ್ಲದೆ ರಾಜ್ಯದಲ್ಲಿ 6 ತಿಂಗಳ ಹಿಂದೆ ಒಂದು ವರ್ಷದ ಮೀರಿದ 60 ಸಾವಿರ ಪ್ರಕರಣಗಳು ವಿಲೇವಾರಿ ಬಾಕಿ ಇದ್ದವು. ಇದೀಗ ಅವು 34 ಸಾವಿರಕ್ಕೆ ಇಳಿಕೆಯಾಗಿದೆ. ಅಷ್ಟರ ಮಟ್ಟಿಗೆ ಕಂದಾಯ ನ್ಯಾಯಾಲಯಗಳು ತ್ವರಿತವಾಗಿ ಕೆಲಸ‌ ನಿರ್ವಹಿಸಿವೆ ಎಂದು ಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ‌ ಜುಲೈನಲ್ಲಿ 6 ತಿಂಗಳಿನಿಂದ 5 ವರ್ಷ ವರೆಗೆ ಬಾಕಿ ಇದ್ದ 231 ಪ್ರಕರಣಗಳು ಸೊನ್ನೆಗೆ ತರಲಾಗಿದೆ. ಒಟ್ಟಾರೆ ಗಣನೀಯವಾಗಿ ಕೋರ್ಟ್ ಪ್ರಕರಣ ಇಳಿಕೆಯಾಗಿವೆ ಎಂದರು.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *