ಇಸ್ಲಾಮಾಬಾದ್ :ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್‌ನಲ್ಲಿ ಬಂಧಿಸಲಾಗಿದೆ, ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ರೇಂಜರ್ಸ್ ಇಮ್ರಾನ್ ಖಾನ್‌ರನ್ನು ವಶಕ್ಕೆ ಪಡೆದುಕೊಂಡಿದೆ. ಪಾಕಿಸ್ತಾನದ ಸೇನೆಯನ್ನು ಸಾರ್ವಜನಿಕವಾಗಿ ಟೀಕೆ ಮಾಡಿದ ಕೆಲವೇ ದಿನಗಳಲ್ಲಿ ಇಮ್ರಾನ್ ಖಾನ್‌ರನ್ನು ಬಂಧಿಸಲಾಗಿದೆ.
ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ನನ್ನು ಬಂಧಿಸಲಾಗಿದೆ, ವಿಶ್ವವಿದ್ಯಾಲಯಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದರು ಎಂದು ಉದ್ಯಮಿ ಮಲ್ಲಿಕ್ ರಿವಾಜ್ ಹೇಳಿದ್ದರು.ಇ ಮ್ರಾನ್ ಮತ್ತು ಅವರ ಪತ್ನಿ ತಮ್ಮ ಹೆಸರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಪಡೆದಿದ್ದಾರೆ. ನಂತರ ರಿಯಾಜ್ ಮತ್ತು ಅವರ ಮಗಳ ನಡುವಿನ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದೆ. ಇದರಲ್ಲಿ ಇಮ್ರಾನ್ ಪತ್ನಿ ಬುಶ್ರಾ ಬೀಬಿ ತನಗೆ ಐದು ಕ್ಯಾರೆಟ್ ವಜ್ರದ ಉಂಗುರ ಬೇಕೆಂದು ನಿರಂತರವಾಗಿ ಕೇಳುತ್ತಿದ್ದಳು ಎಂದು ರಿಯಾಜ್ ಪುತ್ರಿ ಹೇಳಿದ್ದಾಳೆ.
ರಾಜಧಾನಿಯ ನ್ಯಾಯಾಲಯಕ್ಕೆ ಸೇರಿದ ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಸ್ಲಾಮಾಬಾದ್‌ನ ಸೆಷನ್ಸ್ ನ್ಯಾಯಾಲಯವು ಖಾನ್‌ಗೆ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಇದಕ್ಕೂ ಹಿಂದಿನ ದಿನ ಸಿವಿಲ್ ನ್ಯಾಯಾಧೀಶ ರಾಣಾ ಮುಜಾಹಿದ್ ರಹೀಮ್ ಅವರು ಮೂರು ಪುಟಗಳ ಕಾಯ್ದಿರಿಸಿದ ತೀರ್ಪನ್ನು ಬಿಡುಗಡೆ ಮಾಡಿದ್ದರು. ಕೋರ್ಟ್‌ಗೆ ಇಮ್ರಾನ್ ಖಾನ್ ಪದೇಪದೇ ಹಾಜರಾಗದೆ ಇರುವ ಕಾರಣ ಜಾಮೀನುರಹಿತ ವಾರಂಟ್ ಅನ್ನು ಅವರು ಹೊರಡಿಸಿದ್ದರು.