ಮೂಡುಬಿದಿರೆ : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಕಡಂದಲೆ ಇದರ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ 169ನೇ ಜನ್ಮ ದಿನಾಚರಣೆ ನಡೆಯಿತು.
ಬೆಳಿಗ್ಗೆ 8ಗಂಟೆಯಿಂದ 11ಗಂಟೆ ವರೆಗೆ ಶ್ರೀ ನಿತ್ಯಾನಂದ ಭಜನಾ ಮಂಡಳಿ, ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ, ಪಾಲಡ್ಕ ವರ್ಣಬೆಟ್ಟು,ಬ್ರಹ್ಮ ಶ್ರೀ ನಾರಾಯಣ ಗುರು ಭಜನಾ ಮಂಡಳಿ, ಕಡಂದಲೆ ಪಾಲಡ್ಕ ಇವರಿಂದ ಕುಳಿತು ಭಜನೆ ಹಾಗೂ ಶ್ರೀ ಯಕ್ಷ ಭಜನಾ ಮಂಡಳಿ, ಜನತಾ ನಗರ ಇವರಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.ಸದಾನಂದ ಶಾಂತಿ ಗುರು ಪೂಜೆ ನೆರವೇರಿಸಿದರು.
ಬಳಿಕ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ,ಮಹಿಳಾ ಘಟಕ, ಸೇವಾದಳ, ಹಾಗೂ ಭಜನಾ ಮಂಡಳಿಯ ಅದ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.