Share this news

ಮೂಡಬಿದಿರೆ: ಪಾಲಡ್ಕ ಸಂತ ಇಗ್ನೇಸಿಯಸ್ ಲೋಯೋಲ ಕ್ರೈಸ್ತ ದೇವಾಲಯದಲ್ಲಿ ಶುಕ್ರವಾರ (ಸೆ.8) ಮೊಂತಿ ಫೆಸ್ತ್ ಹಬ್ಬವನ್ನು ಕ್ರೈಸ್ತ ರು ಸಂಭ್ರಮದಿಂದ ಆಚರಿಸಿದರು.

ಕ್ಷೇತ್ರದ ಧರ್ಮ ಗುರು ವಂದನೀಯ ಎಲ್ಯಸ್ ಡಿಸೋಜರವರು ಬಲಿ ಪೂಜೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿ ನೆರೆದ ಸಮಸ್ಥ ಊರ ಪರವೂರ ಬಾಂಧವರಿಗೆ ಶುಭಹಾರೈಸಿ ಆಶೀರ್ವದಿಸಿದರು.

ಚರ್ಚ್ ಉಪಾಧ್ಯಕ್ಷ ಆವಿಲ್ ಡಿ ಸೋಜಾ, ಕಾರ್ಯದರ್ಶಿ ಶ್ರೀಮತಿ ಅನ್ಸಿಲ್ಲ ಮೆಟಿಲ್ಡಾ ಕರ್ಡೋಜ, ಇಪ್ಪತ್ತೊಂದು ಆಯೋಗಗಳ ಸಂಚಾಲಕ ಡೇನಿಸ್ ಡಿಮೆಲ್ಲೋ, ವಾಳೆಗಳ ಗುರಿಕಾರರು, ಚರ್ಚ್ ಪಾಲನಾ ಮಂಡಳಿಯ ಸದಸ್ಯರುಗಳು , ಕಾನ್ವೆಂಟಿನ ಭಗಿನಿಯರು ಮತ್ತು ಚರ್ಚಿನ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರುಗಳು ಉಪಸ್ಥಿತರಿದ್ದರು.

ದಾನ ರೂಪದಲ್ಲಿ ಬಂದ ಕಬ್ಬು ಮತ್ತು ಅಕ್ಕಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಮೊಂತಿಫೆಸ್ತ್ ದೇವಪುತ್ರ ಏಸುಕ್ರಿಸ್ತರಿಗೆ ಭೂಮಿಯ ಅವತಾರಕ್ಕೆ ಅವಕಾಶ ಕಲ್ಪಿಸಿದ ಮೇರಿಯಮ್ಮಳ ಜನ್ಮದಿನವಾಗಿದ್ದು, ಚರ್ಚ್ ಗಳಲ್ಲಿ ಬಲಿ ಪೂಜೆ, ಹೊಸತೆನೆ ವಿತರಣೆ, , ಪುಷ್ಪಾರ್ಚನೆ ಮೆರವಣಿಗೆ ಮೂಲಕ ಮೇರಿ ಮಾತೆಗೆ ನಮನ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ . ಮೊಂತಿಫೆಸ್ತ್ ನ ಪೂರ್ವಭಾವಿಯಾಗಿ ಇಗರ್ಜಿಗಳಲ್ಲಿ ಒಂಬತ್ತು ದಿನ ದೇವಾಲಯಗಳಲ್ಲಿ ಬಲಿಪೂಜೆ, ನೊವೆನಾ ನಡೆಯುತ್ತದೆ. ಮಾತೆ ಮೇರಿಗೆ ಪುಷ್ಪಗಳನ್ನು ಅರ್ಪಿಸಿ ತಂತಮ್ಮ ವೈಯುಕ್ತಿಕ ಹಾಗು ಸಾರ್ವಜನಿಕ ಪ್ರಾರ್ಥನೆಗಳೊಂದಿಗೆ ಭಕ್ತಿ ಗೀತೆಗಳೊಂದಿಗೆ ಸ್ತುತಿಸಲಾಗುತ್ತದೆ.

Leave a Reply

Your email address will not be published. Required fields are marked *