ಪುತ್ತೂರು : ಇಲ್ಲಿನ ಈಶ್ವರಮಂಗಲದ ಅಮರಗಿರಿಯಲ್ಲಿ ಭಾರತಮಾತಾ ಮಂದಿರವನ್ನು ಕೇಂದ್ರ ಗ್ರಹ ಸಚಿವ ಅಮಿತ್ ಶಾ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಇದನ್ನು ಧರ್ಮಶ್ರೀ ಪ್ರತಿಷ್ಠಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಇದು ಭಾರತ ಮಾತಾ ಮತ್ತು ಅವರ ವೀರಯೋಧರನ್ನು ಸ್ಮರಿಸುವುದು , ಜನರಲ್ಲಿ ದೇಶಭಕ್ತಿಯ ಉತ್ಸಾಹವನ್ನು ತುಂಬುವ ಗುರಿಯನ್ನು ಹೊಂದಿದೆ ಎಂದರು.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಭಾರತ ಮಾತಾ ಮಂದಿರದ ನಂತರ ದಕ್ಷಿಣದಲ್ಲಿ ಇದು ಎರಡನೇ ದೇವಾಲಯವಾಗಿದೆ. ದೇವಾಲಯದ ಒಳಗೆ ಅಮೃತಶಿಲೆಯಲ್ಲಿ ನಿರ್ಮಿಸಲಾದ ಆರು ಅಡಿ ಎತ್ತರದ ಭಾರತಮಾತೆಯ ಮತ್ತು ಮೂರು ಅಡಿ ಎತ್ತರದ ರೈತರು ಮತ್ತು ಯೋಧರ ಪ್ರತಿಮೆಗಳಿವೆ ಉದ್ಘಾಟನೆಗೂ ಮುನ್ನ ಪುತ್ತೂರು ಸಮೀಪದ ಈಶ್ವರ ಮಂಗಲದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಹನುಮಗಿರಿ ಅಮಿತ್ ಶಾ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಜೊತೆಯಲ್ಲಿದ್ದರು.
ನಂತರ ನಗರದ ವಿವೇಕಾನಂದ ಕಾಲೇಜಿನ ಬೃಹತ್ ಆವರಣದಲ್ಲಿ 50 ವರ್ಷದ ಕ್ಯಾಂಪ್ಕೋ ಸುವರ್ಣ ಸಂಭ್ರಮ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಂತೆ ಜನರತ್ತ ಕೈ ಬೀಸಿದ್ದಾರೆ.
ಕರ್ನಾಟಕವನ್ನು ಪ್ರಚಂಡ ಬಹುಮತದಿಂದ ಬಿಜೆಪಿ ಪಕ್ಷವನ್ನು ಗೆಲ್ಲಿಸೋಣ ಎಂದು ಅಮಿತ್ ಜನರಿಗೆ ಕರೆ ಕೊಟ್ಟಿದ್ದಾರೆ.
ಮಂಗಳೂರಿನ ಪವಿತ್ರವಾದ ಪುಣ್ಯ ಭೂಮಿ , ʻಕಾಂತಾರ ಸಿನಿಮಾʼ ನೋಡಿ ಸಮೃದ್ದ ಪರಂಪರೆ ಸಂಸ್ಕೃತಿ ಗೊತ್ತಾಯ್ತು.,ಗುಜರಾತ್ ತುಂಬಾಜನರು ಮಂಗಳೂರಿನ ಅಡಕೆ ತಿನ್ನುತ್ತಾರೆ . ಮಂಗಳೂರಿನ ಅಡಕೆ ತಿಂದು ನಿಮ್ಮನ್ನು ನೆನಪಿಸಿಕೊಳ್ಳುತ್ತೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷಿ ಸಮೃದ್ದವಾಗಿದೆ. ಕೇಂದ್ರ ಸರ್ಕಾರ ರೈತರ ಹಿತವನ್ನು ಕಾಪಾಡುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಒತ್ತು ನೀಡುತ್ತೇವೆ.
ಪಂಡಿತ್ ದೀನಾದಯಾಳ್ ಹಾಕಿಕೊಟ್ಟ ಮಾರ್ಗವನ್ನು ಪಾಲಿಸಿಕೊಂಡು ಬಂದಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಸುಭದ್ರವಾಗಿದೆ. ಭ್ರದಾವತಿ ಕ್ಯಾಂಪ್ಕೋ ವೇರ್ ಹೌಸ್ ಉದ್ಘಾಟನೆಯಾಗಿದೆ. ಇಂದು ಕ್ಯಾಂಪ್ಕೋ ಅಗ್ರಿಮಾಲ್ ಶಿಲಾನ್ಯಾಸ ನೇರವೇರಿಸಿದ್ದೇವೆ . ಕ್ಯಾಂಪ್ಕೋ ಅಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮತ್ತಿತರರು ಉಪಸಿತರಿದ್ದರು