ಕಾರ್ಕಳ: ಪರಶುರಾಮ ಥೀಮ್ ಪಾರ್ಕಿನ ಕಂಚಿನ ಮೂರ್ತಿ ನಕಲಿ ಎಂದು ಸಾಬೀತಾದ ಬಳಿಕ ಪೊಲೀಸ್ ಪಹರೆಯಲ್ಲಿ ಅಸಲಿ ಮೂರ್ತಿ ಪ್ರತಿಷ್ಠಾಪಿಸುತ್ತಿರುವುದು ದುರಂತ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಹೇಳಿದ್ದಾರೆ.
ಚುನಾವಣೆಯ ಲಾಭ ಪಡೆದುಕೊಳ್ಳಲು ಕಂಚಿನ ಪ್ರತಿಮೆ ಎಂದು ನಂಬಿಸಿ ಕಾರ್ಕಳ ಶಾಸಕರು ನಕಲಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಕಾರ್ಕಳದ ಜನತೆಗೆ ದ್ರೋಹ ಬಗೆದಿದ್ದಾರೆ. ಈಗ ಪೊಲೀಸ್ ಭದ್ರತೆಯಲ್ಲಿ ನಿಜವಾದ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ, ಬೃಹತ್ ಕಂಟೇನರ್ ಗಳಲ್ಲಿ ಮೂರ್ತಿಯ ಅಸಲಿ ಭಾಗಗಳು ಬಂದಿರುವ ಕುರಿತು ಸ್ಪಷ್ಟ ಮಾಹಿತಿಯಿದೆ, ಪರಶುರಾಮ ಮೂರ್ತಿ ಪ್ರತಿಷ್ಠಾಪನೆಯಾಗಬೇಕೆನ್ನುವುದು ನಮ್ಮದು ಕೂಡ ಒತ್ತಾಯವಾಗಿದೆ ಈ ಕಾಮಗಾರಿ ಒಳ್ಳೆಯ ರೀತಿಯಲ್ಲಿ ಮುಗಿಯಲಿ ಆದರೆ ದೇವರ ಮೇಲಿನ ನಂಬಿಕೆಗೆ ವಿರುದ್ಧವಾಗಿ ಪರಶುರಾಮನ ನಕಲಿ ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ನಂಬಿಕೆಗೆ ಕೊಡಲಿಯೇಟು ಹಾಕಿರುವುದು ಖಂಡನೀಯ, ಪರಶುರಾಮನಿಗೆ ದ್ರೋಹ ಎಸಗಿದವರಿಗೆ ಪರಶುರಾಮನೇ ಶಿಕ್ಷಿಸಲಿ ಎಂದಿದ್ದಾರೆ