ವಾಷಿಂಗ್ಟನ್:ಪ್ಯಾಲಸ್ತೀನಿಯ ಹಮಾಸ್ ಉಗ್ರ ಸಂಘಟನೆ ಯು ಇಸ್ರೇಲಿ ಮೇಲೆ ನಡೆಸಿದ ಪೈಶಾಚಿಕ ದಾಳಿಯ ಹಿನ್ನೆಲೆಯಲ್ಲಿ ಆನ್ಲೈನ್’ನಲ್ಲಿ ಭಯೋತ್ಪಾದಕ ವಿಷಯ ಹರಡುವುದನ್ನು ಪರಿಶೀಲಿಸುವ ಕ್ರಮವಾಗಿ ಹಮಾಸ್ ಸಂಘಟನೆಯ ನೂರಾರು ಟ್ವಿಟರ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಟ್ವಿಟರ್ ‘ಎಕ್ಸ್’ನ ಸಿಇಒ ಲಿಂಡಾ ಯಾಕರಿಯೊ ಹೇಳಿದ್ದಾರೆ. ದಾಳಿಯ ನಂತರ ಹತ್ತಾರು ವಿಷಯಗಳನ್ನು ತೆಗೆದುಹಾಕಲು ಕಂಪನಿಯು ಕ್ರಮ ಕೈಗೊಂಡಿದೆ.
ಕಂಪನಿಯ ಸುರಕ್ಷತಾ ಖಾತೆಯ ಪ್ರಕಾರ, ಕಳೆದ ಎರಡು ದಿನಗಳಲ್ಲಿ, ಸಂಘರ್ಷ ಪ್ರದೇಶದಲ್ಲಿ ಟ್ವಿಟರ್ ಖಾತೆಯಲ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜೊತೆಗೆ ಹಮಾಸ್ ಇಸ್ರೇಲ್ ಮೇಲೆ ವಾರಾಂತ್ಯದಲ್ಲಿ ನಡೆಸಿದ ಭಯೋತ್ಪಾದಕ ದಾಳಿಯನ್ನು ಸಮರ್ಥಿಸಿ ಜಾಗತಿಕವಾಗಿ 50 ದಶಲಕ್ಷಕ್ಕೂ ಹೆಚ್ಚು ಪೋಸ್ಟ್ ಗಳನ್ನು ಅಪ್ಲೋಡ್ ಮಾಡಲಾಗಿದೆ ಎಂದು ಟ್ವಿಟರ್ ಎಕ್ಸ್ ಸಿಇಒ ಸ್ಪಷ್ಟಪಡಿಸಿದ್ದಾರೆ.