Share this news

ಕಾರ್ಕಳ: ಡಯಾಲಿಸಿಸ್ ರೋಗಿಗಳ ಆರೋಗ್ಯ ಸಮಸ್ಯೆಗೆ ಸ್ಪಂದಿಸಬೇಕಿದ್ದ ರಾಜ್ಯ ಸರಕಾರ ಡಯಾಲಿಸಿಸ್ ವಿಭಾಗದಲ್ಲಿ ದುಡಿಯುತ್ತಿರುವ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿದ್ದು,ರಾಜ್ಯ ಸರ್ಕಾರ ನೌಕರರ ಬೇಡಿಕೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ನೌಕರರಿಗೆ ನೋಟೀಸ್ ನೀಡಿ ಅವರ ವಿರುದ್ಧ ಶಿಸ್ತು ಕ್ರಮದ ಬೆದರಿಕೆಯೊಡ್ಡಿ ದೌರ್ಜನ್ಯ ಎಸಗುತ್ತಿರುವುದು ಖಂಡನೀಯ ಹಾಗೂ ನೌಕರರಿಗೆ ನೊಟೀಸ್ ನೀಡುವ ಮೂಲಕ ಸಾರ್ವಜನಿಕರ ಮೇಲೆ ಸರಕಾರಕ್ಕಿರುವ ನಿರ್ಲಕ್ಷö್ಯ ಹಾಗೂ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು
ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಆರೋಪಿಸಿದ್ದಾರೆ
ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದ ಗುತ್ತಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ
ಪಾಲ್ಗೊಂಡಿರುವುದರಿAದ ಡಯಾಲಿಸಿಸ್ ರೋಗಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಶುಶ್ರೂಷಾಧಿಕಾರಿ,
ಡಯಾಲಿಸಿಸ್ ತಂತ್ರಜ್ಞರು ಡಿ ಗ್ರೂಪ್ ನೌಕರರಿಗೆ ಡಿ.01 ರಂದು ವಾಟ್ಸಾಪ್ ಸಂದೇಶದ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದಾರೆ. ಹಾಜರಾಗದೇ ಇದ್ದಲ್ಲಿ ಶಿಸ್ತು ಕ್ರಮದ ಬೆದರಿಕೆಯನ್ನು ಒಡ್ಡಿದ್ದಾರೆ.
ಇದು ಯಾವ ನಿಯಮ? ಸರಕಾರ ಆರೋಗ್ಯ ಕ್ಷೇತ್ರದ ನೌಕರರ ಸಮಸ್ಯೆಗೆ ಸ್ಪಂದಿಸಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ
ನೋಡಿಕೊಳ್ಳಬೇಕಿತ್ತು. ಅದರ ಬದಲು ನೌಕರರಿಗೆ ಬೆದರಿಕೆಯೊಡ್ಡುತ್ತಿರುವುದು ಸರಕಾರದ ವೈಫಲ್ಯ, ದುಸ್ತಿತಿಯನ್ನು ಎತ್ತಿ ತೋರಿಸುತ್ತಿದೆ.
ಸಾರ್ವಜನಿಕರ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಿದ್ದ ಸರಕಾರ, ಪ್ರತಿಭಟನಾ ನಿರತ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ, ಸಮಸ್ಯೆ
ಬಗೆಹರಿಸಿ, ಸೌಕರ್ಯ ಒದಗಿಸಿ ರೋಗಿಗಳ ಹಿತ ಕಾಪಾಡಬೇಕಿತ್ತು. ನೌಕರರ ಕಾನೂನು ಬದ್ಧ ಬೇಡಿಕೆಗಳಾದ ಉತ್ತಮ ವೇತನ, ಭವಿಷ್ಯನಿಧಿ,
ಇ.ಎಸ್.ಐ ಮೊದಲಾದ ಸೌಕರ್ಯಗಳನ್ನು ನೀಡುವುದು ಸರಕಾರದ ಕರ್ತವ್ಯ. ಸರಕಾರ ಶಿಸ್ತುಕ್ರಮದ ನೊಟೀಸ್ ಮೂಲಕ ಗುಬ್ಬಿಯ ಮೇಲೆ
ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ, ಬಡ ನೌಕರರನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಸರಕಾರದ ವೈಫಲ್ಯಕ್ಕಿದು ಸಾಕ್ಷಿಯಾಗಿದ್ದು, ಪ್ರತಿಭಟನಾ ನಿರತರ ಮೇಲಿನ ಸರಕಾರದ ದೌರ್ಜನ್ಯ ನಿಲ್ಲಿಸಬೇಕು ಹಾಗೂ ನೌಕರರ ಸಮಸ್ಯೆಗಳಿಗೆ ಕೂಡಲೆ ಪರಿಹಾರ ನೀಡಬೇಕು. ರೋಗಿಗಳಿಗೆ ತೊಂದೆಯಾಗದAತೆ ಸರಕಾರ ತುರ್ತಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ತಾಲೂಕು ಆಸ್ಪತ್ರೆಯಲ್ಲಿ ಪ್ರತಿ ನಿತ್ಯ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿರುವ ರೋಗಿಗಳಿಗೆ, ತುರ್ತು ಡಯಾಲಿಸಿಸ್ ಚಿಕಿತ್ಸೆ
ದೊರಕದೇ ಪ್ರಾಣಹಾನಿ ಸಂಭವಿಸಿದ್ದಲ್ಲಿ ಅದಕ್ಕೆ ಸರಕಾರವೇ ನೇರ ಹೊಣೆಯಾಗುತ್ತದೆ ಹಾಗೂ ಈ ನೌಕರರ ಸಮಸ್ಯೆಯನ್ನು ಸರ್ಕಾರ
ಗಂಭೀರವಾಗಿ ಪರಿಗಣಿಸಿ, ಡಯಾಲಿಸಿಸ್ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದAತೆ, ತಕ್ಷಣಕ್ಕೆ ಡಯಾಲಿಸಿಸ್ ಸಿಬ್ಬಂದಿಗಳ
ಸಮಸ್ಯೆಯನ್ನು ಬಗೆಹರಿಸಬೇಕೆಂದು ಮಹಾವೀರ ಹೆಗ್ಡೆ ಆಗ್ರಹಿಸಿದ್ದಾರೆ

 

Leave a Reply

Your email address will not be published. Required fields are marked *