ಉಡುಪಿ : ಮೀನುಗಾರಿಕೆ ಇಲಾಖೆಯ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನುಗಾರರ ಸುರಕ್ಷತೆ ಮತ್ತು ಸುರಕ್ಷತೆಯನ್ನು ಬಲಪಡಿಸುವುದು ಹಾಗೂ ಮೀನುಗಾರಿಕೆ ವಿಸ್ತರಣೆ ಮತ್ತು ಬೆಂಬಲ ಸೇವೆ ಯೋಜನೆಯ ಸೌಲಭ್ಯ ಪಡೆಯಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮತ್ಸ್ಯ ಸಂಪದ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಉಪಘಟಕಗಳಾದ ಉತ್ಪಾದನೆ ಮತ್ತು ಉತ್ಪಾದಕತೆಯ ವರ್ಧನೆಗೆ ಸಂಬಧಿಸಿದ ಯೋಜನೆಗಳಾದ ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ಅಭಿವೃದ್ಧಿ, ಕಡಲ ಕೃಷಿ ಮತ್ತು ಕಡಲಕಳೆ ಕೃಷಿ ಸೇರಿದಂತೆ ಸಮುದ್ರ ಮೀನುಗಾರಿಕೆಯ ಅಭಿವೃದ್ಧಿ, ಅಲಂಕಾರಿಕ ಮತ್ತು ಮನರಂಜನಾ ಮೀನುಗಾರಿಕೆಯ ಅಭಿವೃದ್ಧಿ ಹಾಗೂ ತಂತ್ರಜ್ಞಾನದ ಅಳವಡಿಕೆ, ಮೂಲಭೂತ ಸೌಕರ್ಯ ಮತ್ತು ಹಿಡುವಳಿ ನಂತರದ ಚಟುವಟಿಕೆಗಳಿಗೆ ಸಂಬAಧಿಸಿದAತೆ ಹಿಡುವಳಿ ನಂತರದ ಮತ್ತು ಶೀತಲ ಸರಪಳಿ ಮೂಲಸೌಕರ್ಯ, ಮೀನು ಮಾರುಕಟ್ಟೆಗಳು ಮತ್ತು ಮಾರಾಟ ಮೂಲಸೌಕರ್ಯ ಹಾಗೂ ಆಳ ಸಮುದ್ರದ ಮೀನುಗಾರಿಕೆಯ ಅಭಿವೃದ್ಧಿ ಮತ್ತು ಮೀನುಗಾರಿಕೆ ನಿರ್ವಹಣೆ ಮತ್ತು ನಿಯಂತ್ರಣ ವಿಧಿಗಳಿಗೆ ಸಂಬಧಿಸಿದAತೆ ಮೀನುಗಾರರ ಸುರಕ್ಷತೆ ಮತ್ತು ಸುರಕ್ಷತೆಯನ್ನು ಬಲಪಡಿಸುವುದು ಹಾಗೂ ಮೀನುಗಾರಿಕೆ ವಿಸ್ತರಣೆ ಮತ್ತು ಬೆಂಬಲ ಸೇವೆ ಯೋಜನೆಯ ಸೌಲಭ್ಯ ಪಡೆಯಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಕುಂದಾಪುರ, ಉಡುಪಿ ಹಾಗೂ ಕಾರ್ಕಳ ಕಚೇರಿ ಹಾಗೂ ಮೀನುಗಾರಿಕೆ ಉಪನಿರ್ದೇಶಕರು, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.