Share this news

ಬೆಂಗಳೂರು: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನೇ ಬಿಟ್ಟು ವಿಮಾನ ಹಾರಿದ ಘಟನೆ ನಡೆದಿದೆ. ನಿನ್ನೆ ಬೆಂಗಳೂರಿನಿಂದ  ಹೈದರಾಬಾದ್​ಗೆ  ತೆರಳಬೇಕಿದ್ದ ರಾಜ್ಯಪಾಲರು,  ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿಮಾನವನ್ನು ಮಿಸ್ ಮಾಡಿಕೊಂಡಿದ್ದಾರೆ.

ಥಾವರ್ ಚಂದ್ ಗೆಹ್ಲೋಟ್ ಅವರು ಹೈದರಾಬಾದ್​ಗೆ ತೆರಳು ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು, ಆದ್ರೆ, ಇನ್ನೂ ಏರ್‌ ಏಷ್ಯಾ ವಿಮಾನ ಹೊರಡಲು ಸಮಯ ಇದೆ ಎಂದು ಸಿಬ್ಬಂದಿ ರಾಜ್ಯಪಾರನ್ನು ಕರೆದುಕೊಂಡು ಹೋಗಿ ವಿಐಪಿ ಲಾಂಜ್​ನಲ್ಲಿ ಕೂರಿಸಿದ್ದು, ಟೈಮ್​ ಆಗಿರುವುದು ಅವರ ಗಮನಕ್ಕೆ ಬಂದಿಲ್ಲ. ಇದರಿಂದ ವಿಮಾನ ಸರಿಯಾದ ಸಮಯಕ್ಕೆ ಟೇಕಫ್​ ಆಗಿ ಹೋಗಿದೆ.

ಬಳಿಕ ಫ್ಲೈಟ್ ಸಮಯವಾಗಿರುವುದು ಗಮನಕ್ಕೆ ಬಂದ ಕೂಡಲೇ ರಾಜ್ಯಪಾಲರು ವಿಮಾನ ಹತ್ತಲು ಹೋಗಿದ್ದಾರೆ. ಆದ್ರೆ, ಅಷ್ಟರಲ್ಲಾಗಲೇ ವಿಮಾನ ಹೋಗಿತ್ತು. ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಮಾನ ತಪ್ಪಿದೆ. ಬಳಿಕ ಅಧಿಕಾರಿಗಳು ಮತ್ತೊಂದು ವಿಮಾನದ ಮೂಲಕ ಅವರನ್ನು ಹೈದರಾಬಾದ್​ಗೆ ಕಳುಹಿಸಿಕೊಟ್ಟಿದ್ದಾರೆ.  ಸಿಬ್ಬಂದಿ ನಿರ್ಲಕ್ಷ್ಯತನದಿಂದ ರಾಜ್ಯಪಾಲರು ಒಂದು ಗಂಟೆ ತಡವಾಗಿ ಹೈದರಾಬಾದ್​ಗೆ ತೆರಳಬೇಕಾಯ್ತು.

ಏರ್​ಪೋರ್ಟ್​​ನಲ್ಲಿ ರಾಜ್ಯಪಾಲರಿಗೆ ವಿಮಾನ ಮಿಸ್​ ಆದ ಹಿನ್ನೆಲೆ​ಯಲ್ಲಿ ಶಿಷ್ಟಾಚಾರ ಅಧಿಕಾರಿಗಳು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್​ ಠಾಣೆಗೆ ಏರ್ ಏಷ್ಯಾ ಏರ್​​ಲೈನ್ಸ್ ದೂರು ನೀಡಿದ್ದಾರೆ.‌ ವಿಮಾನ ಮಿಸ್ ಆಗಲು ಕಾರಣ ಜೊತೆಗೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಆಧರಿಸಿ ಏರ್​ಪೋರ್ಟ್​ ಪೊಲೀಸರು ಇಂದು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *