Share this news

ಬೆಂಗಳೂರು  : ಪ್ರೇಮಿಗಳ ದಿನಾಚರಣೆ  ಅಂದರೆ ಪ್ರೀತಿಯಲ್ಲಿ ಬಿದ್ದ  ತರುಣರಿಗೆ ಇನ್ನಿಲ್ಲದ ಸಂತಸ.ಆದರೆ  ಇದಕ್ಕೆ ಬ್ರೇಕ್ ಹಾಕಲು ಹಿಂದೂ ಪರ ಸಂಘಟನೆಗಳು ಮುಂದಾಗಿವೆ.  

 ಪ್ರೇಮಿಗಳ ದಿನಾಚರಣೆ ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು ಸಂಸ್ಕಾರವಿಲ್ಲದ ಇಂಥ ಆಚರಣೆಗಳಿಂದ ಭಾರತದ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂದು ಹಿಂದೂ ಪರ ಸಂಘಟನೆಗಳು ವಿರೋಧಿಸಲು ಮುಂದಾಗಿವೆ.

ಭಾರತದ ಉಜ್ವಲ ಭವಿಷ್ಯವನ್ನ ರೂಪಿಸಬೇಕಾದ ಈ ದೇಶದ ಯುವಕರು ಶ್ರೇಷ್ಠ ಭಾರತೀಯ ಸಂಸ್ಕೃತಿಯನ್ನು ಮರೆತು ‘ಪ್ರೇಮಿಗಳ ದಿನಾಚರಣೆ’ಯಂತಹ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಹಿಂದೂ ಸಂಘಟನೆಗಳು ಈಬಾರಿಯ ಪ್ರೇಮಿಗಳ ದಿನಾಚರಣೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

ಇನ್ನೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ   ಫೆ.14 ರಂದು ಗೋ ಹಗ್ ಡೇ ಆಚರಣೆ ಮಾಡುವಂತೆ ಕರೆ ಕೊಟ್ಟಿದ್ದು.. ಹಸು ಅಪ್ಪುಗೆಯ ದಿನ ತಾಯಿ ಹಸುವಿನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಜೀವನವನ್ನ ಸಂತೋಷದಿಂದ ಮತ್ತು ಸಕಾರಾತ್ಮಕ ಶಕ್ತಿಯಿಂದ  ನಡೆಸಬಹುದಾಗಿದೆ. ಹೀಗಾಗಿ ಹಸು ಅಪ್ಪುಗೆಯ ದಿನ ಯೋಗದಿನದಂತೆಯೇ ಫೆ.14 ಆಚರಿಸುವಂತೆ ಕರೆ ಕೊಟ್ಟಿದ್ದಾರೆ.

ಫೆಬ್ರುವರಿ 14ನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಹಸು ಅಪ್ಪುಗೆಯ ದಿನ ಎಂದು ಘೋಷಣೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಜೊತೆ ಹಲವು ಹಾಸ್ಯದ ಅಲೆ ಸೃಷ್ಟಿಸಿದೆ.
ಹಲವರು ಹಸುವನ್ನು ಅಪ್ಪುವ ದಿನ ಎಂದು ಘೋಷಿಸಿದ್ದನ್ನು ವ್ಯಂಗ್ಯವಾಡಿದ್ದಾರೆ. ಈ ಹಾಸ್ಯ ಪರ ವಿರೋಧಗಳ ಹೊರತಾಗಿಯೂ ಹಸುವನ್ನು ಅಪ್ಪಿಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ ಎಂಬುದನ್ನು ಅರಿತುಕೊಳ್ಳಬೇಕಿದೆ.

ಹಸುವಿನ ನಿಧಾನಗತಿಯ ಹೃದಯ ಬಡಿತ, ಬೆಚ್ಚಗಿನ ದೇಹದ ಉಷ್ಣತೆ ಮತ್ತು ದೊಡ್ಡ ಗಾತ್ರವೂ ಹಸುವನ್ನು ತಬ್ಬಿಕೊಳ್ಳುವ ಮಾನವರಿಗೆ ಹಿತವಾದ ಅನುಭವವನ್ನು ನೀಡುತ್ತದೆ ಮತ್ತು ಅವರಿಗೆ ವಿಶ್ರಾಂತಿ ನೀಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇಂಟರ್‌ ನ್ಯಾಷನಲ್ ಜರ್ನಲ್ ಆಫ್ ಕೇರಿಂಗ್ ಸೈನ್ಸ್‌ ಈ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದ್ದು, ಇದರಲ್ಲಿ ‘ಮಾನಸಿಕ ಆರೋಗ್ಯದಲ್ಲಿ ಪ್ರಾಣಿಗಳ ಸಹಾಯದ ಚಿಕಿತ್ಸೆಯ ಪ್ರಯೋಜನಗಳು’ ಎಂಬ ಶೀರ್ಷಿಕೆಯ ಲೇಖನವೂ ಪ್ರಾಣಿಗಳ ಸಂಪರ್ಕವು ಜನರ ಯೋಗಕ್ಷೇಮಕ್ಕೆ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ಹೇಳಿದೆ. ಜನರು ಪ್ರಾಣಿಗಳೊಂದಿಗೆ ಬೆರೆತಾಗ ಸಿರೊಟೋನಿನ್ ಮತ್ತು ಎಂಡಾರ್ಫಿನ್‌ಗಳಂತಹ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಇದು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನ್‌ಗಳ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತವೆ. ಜೊತೆಗೆ ಸಂತೋಷ ಮತ್ತು ಶಾಂತತೆಯ ಭಾವನೆಯನ್ನು ಉಂಟು ಮಾಡುತ್ತದೆ.

Leave a Reply

Your email address will not be published. Required fields are marked *