Share this news

ಕಾರ್ಕಳ :ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಮಹೋತ್ಸವ, ಭಜನಾ ಮಂಗಲೋತ್ಸವ ಮತ್ತು ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮವು ಫೆ. 21ರಿಂದ 24ರವರೆಗೆ ನಡೆಯಲಿದೆ.
ಫೆ. 20ರಂದು ಮಂಗಳವಾರ ಸಂಜೆ 3.30ಕ್ಕೆ ಉಗ್ರಾಣ ಮುಹೂರ್ತ, 4 ಗಂಟೆಗೆ ಎಣ್ಣೆಹೊಳೆ ಜಯರಾಮ್ ಭಟ್ ಸಭಾಭವನದಿಂದ ದೇವಸ್ಥಾನದವರೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಫೆ. 21ರಂದು ಬೆಳಿಗ್ಗೆ 9ಗಂಟೆಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಆದ್ಯ ಗಣಯಾಗ, ನವಗ್ರಹ ಶಾಂತಿ ನಡೆಯಲಿದೆ. ಸಂಜೆ 5 ಗಂಟೆಯಿಂದ ಸಪ್ತಶುದ್ಧಿ, ವಾಸ್ತುಪೂಜೆ, ಹೋಮ ಬಲಿವಿಧಾನ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ, ದಿಕ್ಪಾಲ ಬಲಿವಿಧಾನ, ದ್ವಾರ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಗಂಟೆಯಿಂದ ಮಹಾಮ್ಮಾಯಿ ಯಕ್ಷಗಾನ ಮಂಡಳಿ ಹಂಚಿಕಟ್ಟೆ ಇವರಿಂದ ಶ್ರೀ ದೇವಿ ಮಹಾತ್ಮ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಫೆ. 22ರಂದು ಬೆಳಿಗ್ಗೆ 9.30ರಿಂದ ನವಕ ಪ್ರಧಾನ ಹೋಮ, 108 ಕಲಶ ಸಹಿತ ಬ್ರಹ್ಮಕಲಶಾಧಿವಾಸ, ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆಯ‌ ಬಳಿಕ ಪ್ರಸಾದ ವಿತರಣೆ ಜ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ 7ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 9ಗಂಟೆಗೆ ಕಾಪು ರಂಗತರಂಗ ಕಲಾವಿದರಿಂದ ಒರಿಯೆ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ. 23ರಂದು ಬೆಳಿಗ್ಗೆ 9ಗಂಟೆಗೆ ನಾಗದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಹೋಮ, ಪ್ರಾಯಶ್ಚಿತ್ತ ಹೋಮ, ಆಶ್ಲೇಷಾ ಬಲಿದಾನ ಸೇವೆ, ವಟು ಆರಾಧನೆ, ಬೆಳಿಗ್ಗೆ 10.30ಕ್ಕೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆಯಾಗಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 4ಗಂಟೆಯಿಂದ 12ಗಂಟೆಯವರೆಗೆ 31ನೇ ವರ್ಷದ ಭಜನಾ ಮಂಗಲೋತ್ಸವ ನಡೆಯಲಿದೆ.

ಫೆ. 24ರಂದು ಬೆಳಿಗ್ಗೆ 9ಗಂಟೆಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಎಣ್ಣೆಹೊಳೆ ಭ್ರಾಮರಿ ಮೆಲೋಡೀಸ್ ಅವರಿಂದ ಸಂಗೀತ ರಸಮಂಜರಿ, 7ಗಂಟೆಗೆ ಭಜನಾ ಕಾರ್ಯಕ್ರಮ, 8 ಗಂಟೆಗೆ ಗೋಂದ್ಲು ಸೇವೆ, ಮಾರಿ, ರಾತ್ರಿ 9 ಗಂಟೆಗೆ ಮಾಳಕೋಡು ಯಕ್ಷಪಲ್ಲವಿ ಟ್ರಸ್ಟ್‌ ಇವರಿಂದ ಮಾತೆ ಜಗನ್ಮಾಥೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ವ್ಯವಸ್ಥಾಪನ ಮಂಡಳಿ ತಿಳಿಸಿದೆ

 

Leave a Reply

Your email address will not be published. Required fields are marked *