ನವದೆಹಲಿ : ಪ್ರಸ್ತುತ ಭಾರತದಲ್ಲಿನ ಹೆಚ್ಚಿನ UPI ವಹಿವಾಟುಗಳಿಗೆ Google Pay ಮತ್ತು Phone Pay ಖಾತೆಯನ್ನ ಹೊಂದಿದೆ. ಇವುಗಳ ಮೂಲಕ ಜನರು ಹೆಚ್ಚಾಗಿ ನಗದು ರಹಿತ ವಹಿವಾಟು ನಡೆಸುತ್ತಿದ್ದಾರೆ. ಈ ಮಧ್ಯೆ ಜನಪ್ರಿಯ ಮೊಬೈಲ್ ಫೋನ್ ದೈತ್ಯ ಆಪಲ್ ತನ್ನ ಪಾವತಿ ವೈಶಿಷ್ಟ್ಯವಾದ ‘ಆಪಲ್ ಪೇ’ನ್ನ ಭಾರತದಲ್ಲಿ ತರಲು ತಯಾರಿ ನಡೆಸುತ್ತಿದೆ. ಇದಕ್ಕಾಗಿ ಸಂಬಂಧಿತ ಸಂಸ್ಥೆಗಳಾದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯೊಂದಿಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ.
ಆಪಲ್ ಪೇ ಕ್ಷೇತ್ರಕ್ಕೆ ಪ್ರವೇಶಿಸಿದರೆ, ಪ್ರಸ್ತುತ ಪಾವತಿ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನ ಪಾಲನ್ನ ಹೊಂದಿರುವ ಫೋನ್ ಪೇ, ಗೂಗಲ್ ಪೇ, ವಾಟ್ಸಾಪ್ ಪೇ, ಪೇಟಿಎಂಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಆಪಲ್ ಸಿಇಒ ಟಿಮ್ ಕುಕ್ ಈಗಾಗಲೇ ಆಪಲ್ ಪೇಗಾಗಿ ಭಾರತೀಯ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಭೇಟಿಯಾಗಿದ್ದಾರೆ. ಮೂರನೇ ವ್ಯಕ್ತಿಯ ಸಹಾಯವಿಲ್ಲದೆ QR ಕೋಡ್‌ಗಳನ್ನ ಬಳಸಿಕೊಂಡು ಬಳಕೆದಾರರು UPI ವಹಿವಾಟುಗಳನ್ನ ಮಾಡಬಹುದು.
ಫೇಸ್ ಐಡಿ ವೈಶಿಷ್ಟ್ಯವನ್ನ ಬಳಸಿಕೊಂಡು ಬಳಕೆದಾರರು UPI ವಹಿವಾಟುಗಳನ್ನು ಮಾಡಬಹುದು ಎಂಬುದನ್ನ ಖಚಿತಪಡಿಸಿಕೊಳ್ಳಲು Apple ಬಯಸುತ್ತದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಅಮೆರಿಕದಲ್ಲಿ ‘ಆ್ಯಪಲ್ ಪೇ ಲೇಟರ್’ಸೇವೆ ಆರಂಭವಾಗಿದೆ. ‘ಈಗ ಖರೀದಿಸಿ ನಂತರ ಪಾವತಿಸಿ’ ಸೇವೆ ಪ್ರಾರಂಭವಾಗಿದೆ. ಆದರೆ, ಇದು ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ.