ಕಾರ್ಕಳ: ರಾಜ್ಯದಲ್ಲಿ ಹಿಂದುಳಿದ ಎಲ್ಲಾ ಸಮುದಾಯಗಳಿಗೂ ಪ್ರತ್ಯೇಕ ನಿಗಮ ಸ್ಥಾಪಿಸುವ ಮೂಲಕ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.
ಇತ್ತೀಚೆಗೆ ಬಿಲ್ಲವ ಹಾಗೂ ಈಡಿಗ ಸಮುದಾಯದ ಏಳಿಗೆಗಾಗಿ ಸರ್ಕಾರವು ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿದೆ ಇದರಿಂದ ಇದರಿಂದ ಸಾಕಷ್ಟು ಬಡವರಿಗೆ ಉಪಯೋಗವಾಗುತ್ತದೆ ಇದು ಸ್ವಾಗತಾರ್ಹ, ಆದರೆ ಬಂಟ ಸಮುದಾಯದಲ್ಲಿಯೂ ಸಾಕಷ್ಟು ಬಡವರಿದ್ದಾರೆ ಅವರ ಅಭಿವೃದ್ಧಿಗಾಗಿ ಬಂಟ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಬಂಟ ಸಮುದಾಯದ ಮುಖಂಡ ಐಕಳ ಹರೀಶ್ ಶೆಟ್ಟಿ ಆಗ್ರಹಿಸಿದ್ದಾರೆ.
ನಮಗೆ ನಿಗಮ ಸ್ಥಾಪಿಸಿ ಎಂದು ಮನವಿ ಮಾಡುತ್ತೇವೆ ಆದರೆ ಬೇಡುವ ಸ್ಥಿತಿ ನಮಗೆ ಬಂದಿಲ್ಲ,ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ನಾವು ಪ್ರತಿಭಟನೆ ಮಾಡುವುದಿಲ್ಲ ಮುಂದಿನ ಚುನಾವಣೆಯಲ್ಲಿ ನಮಗೆ ಗೆಲ್ಲಿಸಲೂ ಗೊತ್ತಿದೆ ಸೋಲಿಸಲೂ ಗೊತ್ತಿದೆ ಎಂದು ಹರೀಶ್ ಶೆಟ್ಟಿ ಎಚ್ಚರಿಸಿದರು.
ಬಂಟ ಸಮುದಾಯಲ್ಲಿ ಶೇ 75 ರಷ್ಟು ಬಡವರಿದ್ದಾರೆ, ಅವರಿಗೆ ಶಿಕ್ಷಣ,ವಸತಿ, ಆರೋಗ್ಯದ ನೆರವಿನ ಅವಶ್ಯಕತೆಯಿದೆ ಈ ಹಿನ್ನಲೆಯಲ್ಲಿ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕೆAದರು. ನಮ್ಮ ಮನವಿಗೆ ಸೂಕ್ತ ಸ್ಪಂದನೆ ಸಿಗದಿದ್ದರೆ ಬಂಟ ಸಮುದಾಯದ ಹಿತರಕ್ಷಣೆಗೆ ಮುಂದಿನ ಚುನಾವಣೆಯಲ್ಲಿ ಉಡುಪಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಹರೀಶ್ ಶೆಟ್ಟಿ ಎಚ್ಚರಿಸಿದ್ದಾರೆ.