ಕಾರ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಬಜಗೋಳಿ ಸತ್ಯ ಸಾರಮಣಿ ಕಾಲೊನಿಯ ನಿರ್ಗತಿಕರಾದ ಬಾಗಿ ಹರಿಜನ ಇವರಿಗೆ ಸ್ನಾನಗೃಹ ರಚನೆ ಹಾಗೂ ಶೌಚಾಲಯ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಹಾವೀರ್ ಜೈನ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಹಾಗೂ ತಾಲೂಕು ಯೋಜನಾ ಅಧಿಕಾರಿ ಹೇಮಲತಾ ರವರು ಗುರುವಾರ ದಂದು ಬಾಗಿ ಹರಿಜನ ಅವರಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಕಾಮಗಾರಿಗೆ ಸಹಕಾರ ನೀಡಿದ ತಾಲೂಕು ಶೌರ್ಯ ಘಟಕದ ಕ್ಯಾಪ್ಟನ್ ನವೀನ್ ಹಾಗೂ ಬಜಗೋಳಿ ವಲಯ ಅಧ್ಯಕ್ಷೆ ಜಯಲಕ್ಷ್ಮಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ವಲಯ ಮೇಲ್ವಿಚಾರಕ ಮಧುಕಿರಣ್ ಸೇವಾ ಪ್ರತಿನಿಧಿ ಸುಮಿತ್ರಾ ,ಪ್ರಭಾವತಿ ಮುಂತಾದವರು ಉಪಸ್ಥಿತರಿದ್ದರು.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ