Share this news

ಕಾರ್ಕಳ : ಬಜಗೋಳಿ  ಬಂಡಸಾಲೆ ಸುಮ್ಮಗುತ್ತು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವವು   ವಿವಿಧ ಊರುಗಳ ಧರ್ಮ ಬಂಧುಗಳಿಂದ  ಜರುಗಿತು.

ಸಾಗರ ಮುನಿ ಮಹಾ ರಾಜರ ಪಾವನ ಸಾನ್ನಿಧ್ಯದಲ್ಲಿ ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಪಾವನ ಉಪಸ್ಥಿತಿಯಲ್ಲಿ ಮೂಲ್ಕಿ ಅರಸ ರಾದ ದುಗ್ಗಣ್ಣ ಸಾವಂತರು ಕುಟುಂಬಸ್ಥರು, ಅರಳ ರಾಜೇಂದ್ರ ಶೆಟ್ಟಿ ಚಕ್ಕೊಡು ವಿಜಯೇಂದ್ರ ಜೈನ್ ಹಾರಿಗೆ ಇವರು ಪ್ರಥಮ ಕಲಶ ಮಾಡಿ ಮಹಾ ಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದರು.

ಬಳಿಕ ಸುಮ್ಮಗುತ್ತು ಶಂಕರ ಹೆಗ್ಡೆ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುನಿ ಮಹಾರಾಜ್ ಆಶೀರ್ವಚನ ನೀಡಿ ಮಹಾ ಮಸ್ತಕಾಭಿಷೇಕ ನೋಡಿ ಆನಂದವಾಯಿತು ತ್ಯಾಗ ವೈರಾಗ್ಯ ಮಾನವನನ್ನು ಶ್ರೇಷ್ಠ ವ್ಯಕ್ತಿಯಾಗಿ ರೂಪಿಸುವುದು ಎಂದರು.

ಮೂಡುಬಿದಿರೆ ಸ್ವಾಮೀಜಿ ಆಶಿರ್ವಚನ ನೀಡಿ, ಸಮರ್ಪಣೆ, ತಪಸ್ಸು, ನಿಸ್ವಾರ್ಥ ಭಕ್ತಿಯಿಂದ ಸಾಧನೆಯ ಶಿಖರ ತಲುಪುದು ಸಾಧ್ಯ. ಭಗವಂತನ ಸಾಮಿಪ್ಯ ಕರ್ಮ ನಾಶಕ್ಕೆ ಕಾರಣ ದೇವ ಪೂಜೆಯಿಂದ ಶಾಂತಿ ಸಿಗುವುದು ಎಂದರು.

ಮೂಲ್ಕಿ ಅರಸರಾದ ದುಗ್ಗಣ್ಣ ಸಾವಂತರನ್ನು ಕ್ಷೇತ್ರದ ವತಿಯಿಂದ ಗೌರವಿಲಾಯಿತು.
ಈ ಸಂಧರ್ಭ ಪಂಚ ಕಲ್ಯಾಣ ಹಾಗೂ ಮಸ್ತಕಾಭಿಷೇಕ ಸಂಧರ್ಭ ಸೇವೆ ಸಲ್ಲಿಸಿದ ಸ್ವಯಂ ಸೇವಕರನ್ನು ಕಾರ್ಯಕರ್ತರನ್ನು ಸ್ವಾಮೀಜಿ ಹರಸಿ ಆಶೀರ್ವದಿಸಿದರು.
ರಾಷ್ಟ್ರೀಯ ಅಂಗಾAಗ ದಾನ ಸಂಸ್ಥೆಯ ಅಧ್ಯಕ್ಷ ಲಾಲ್ ಗೊಯಲ್ ರಜನಿ ಜೈನ್ sಅಮೇರಿಕಾದ ಪರೇಶ್ ಶಾ, ನಯನ ಪಾರಿಖ್, ವನಿತಾ ಜೈನ್ ಗೌತಮ್ ಮಣಿಪಾಲ ಉದಯವಾಣಿ ಬಳಗ, ಕಿರಣ್ ಹೆಗ್ಡೆ, ಸಂತೋಷ, ಕುಮಾರ್,ಸನತ್ ಕುಮಾರ್,ವೀರಜಯ, ಗುಣ ವರ್ಮಾ, ರಾಜಾವರ್ಮ ಬೈಲಂಗಡಿ ಮೊದಲಾದವರು ಉಪಸ್ಥಿತರಿದ್ದರು

ಸ್ವಸ್ತಿಶ್ರೀ ಕಾಲೇಜು ಪ್ರಾಂಶುಪಾಲೆ ಸೌಮ್ಯ ಶ್ರೀ ಪ್ರಾರ್ಥಿಸಿದರು. ಭರತ್ ಕುಮಾರ್ ಸ್ವಾಗತಿಸಿ, ಯೋಗರಾಜ್ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಜಗೋಳಿ, ಕಾರ್ಕಳ, ಮೂಡುಬಿದಿರೆಯ ವಿವಿಧ ಮಕ್ಕಳಿಂದ ಭಜನೆ ಭಕ್ತಿ ಸಂಗೀತ ನೆರವೇರಿತು. ರವಿರಾಜ್ ಚೌಟ ಪದ್ಮಪ್ರಿಯ, ಪ್ರಮೇ ಯಿ, ಕುಮಾರ್ ಬಲ್ಲಾಳ್ ಮೊದಲದವರು ಸುಶ್ರಾವ್ಯವಾಗಿ ಹಾಡಿದರು.

Leave a Reply

Your email address will not be published. Required fields are marked *